ಸೋಮವಾರ, ಸೆಪ್ಟೆಂಬರ್ 26, 2022
24 °C

ಸಾಕುನಾಯಿಗೂ ಮಂಕಿಪಾಕ್ಸ್ ವೈರಾಣು ಸೋಂಕು ಹರಡುವ ಸಾಧ್ಯತೆ: ವೈದ್ಯರ ವರದಿ

ಎಪಿ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಮಂಕಿಪಾಕ್ಸ್ ವೈರಾಣು ಸೋಂಕಿಗೆ ಒಳಗಾದವರು ಮನೆಯ ಸಾಕುಪ್ರಾಣಿಗಳಿಂದ ದೂರವಿರಲು ಅಮೆರಿಕದ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಾಕುಪ್ರಾಣಿಗಳಿಗೂ ಮಂಕಿಪಾಕ್ಸ್ ವೈರಾಣು ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಫ್ರಾನ್ಸ್‌ನ ವರದಿ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: 

ಅಮೆರಿಕದಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಈಗಾಗಲೇ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.

ಮಂಕಿಪಾಕ್ಸ್ ರೋಗ ಲಕ್ಷಣ ಹೊಂದಿದ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಾಕುಪ್ರಾಣಿಗಳನ್ನು 21 ದಿನಗಳ ವರೆಗೆ ಪ್ರತ್ಯೇಕವಾಸದಲ್ಲಿರಿಸಬೇಕು ಎಂದು ಸಿಡಿಸಿ ಸೂಚಿಸಿದೆ.

ಫ್ರಾನ್ಸ್‌ನಲ್ಲಿ ಕಳೆದ ವಾರ ಪ್ರಕಟಗೊಂಡ ಮೆಡಿಕಲ್ ಜರ್ನಲ್‌ನಲ್ಲಿ ಈ ಕುರಿತು ವರದಿಯಾಗಿತ್ತು. ಮಂಕಿಪಾಕ್ಸ್ ಸೋಂಕಿತ ಜೋಡಿ ಇಟಲಿ ಮೂಲದ ಗ್ರೇಹೌಂಡ್ (greyhound) ಸಾಕುನಾಯಿ ಜೊತೆಗೆ ನಿದ್ರಿಸುತ್ತಿದ್ದರು. ಈ ನಿಕಟ ಸಂಪರ್ಕದಿಂದ ಸಾಕುನಾಯಿಗೆ ವೈರಸ್ ಹರಡಿದೆ ಎಂದು ವರದಿ ತಿಳಿಸಿದೆ.

ಪ್ರಾಣಿಗಳಲ್ಲಿ ಪತ್ತೆಯಾದ ಮಂಕಿಪಾಕ್ಸ್ ವೈರಸ್, ಮನುಷ್ಯರಿಗೂ ಹರಡುತ್ತದೆ. ಮನೆಯಲ್ಲಿ ಸಾಕುನಾಯಿ ಅಥವಾ ಬೆಕ್ಕಿನಂತಹ ಸಾಕುಪ್ರಾಣಿಯಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣ ಇದಾಗಿದೆ ಎಂದು ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು