ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಷಸ್‌: ಎರಡು ಭಾಗವಾದ ಅಪಘಾತಕ್ಕೀಡಾಗಿದ್ದ ಹಡಗು

Last Updated 17 ಆಗಸ್ಟ್ 2020, 9:44 IST
ಅಕ್ಷರ ಗಾತ್ರ

‍ಪೋರ್ಟ್‌ ಲೂಯಿಸ್‌ (ಮಾರಿಷಸ್‌): ಎರಡು ವಾರಗಳ ಹಿಂದೆ ಇಲ್ಲಿನ ಕರಾವಳಿ ತೀರದಲ್ಲಿ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಸಾವಿರ ಟನ್‌ನಷ್ಟು ತೈಲವನ್ನು ಸಮುದ್ರಕ್ಕೆ ಹರಿಸಿದ್ದ ಬೃಹತ್‌ ಹಡಗು ಈಗ ಎರಡು ಭಾಗವಾಗಿದೆ.

ಜಪಾನ್‌ನ ‘ನಾಗಸಾಕಿ ಶಿಪ್ಪಿಂಗ್ ಕಂಪನಿ’ಯ ಒಡೆತನದ ‘ಎಂ.ವಿ.ವಾಕಾಶಿಯೊ’ ಜುಲೈ 25 ರಂದು ಮಾರಿಷಸ್ ಕರಾವಳಿಯ ಆಗ್ನೇಯ ಭಾಗದಲ್ಲಿ, ಸಾಗರ ತಳದ ಬಂಡೆಗಲ್ಲಿಗೆ ಹೊಡೆದು ದುರಂತಕ್ಕೀಡಾಯಿತು. ಅದರಲ್ಲಿದ್ದ ಅಪಾರ ಪ್ರಮಾಣದ ತೈಲ ಸಮುದ್ರಕ್ಕೆ ಸೋರಿಕೆಯಾಯಿತು. ಇದರಿಂದ ಮ್ಯಾಂಗ್ರೋವ್ ಕಾಡುಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳು ಹಾನಿಗೊಳಗಾದವು.

ಅಪಘಾತಕ್ಕೀಡಾದ ಸಮಯದಲ್ಲಿ ಹಡಗು ಬಿರುಕು ಬಿಟ್ಟಿದ್ದನ್ನು ಗಮನಿಸಿದ್ದ ಅಧಿಕಾರಿಗಳು, ಹಡಗು ಎರಡು ತುಂಡಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದರು. ಆಗಸ್ಟ್ 15ರಂದು ಹಡಗು ಇಬ್ಬಾಗವಾಗಿರುವುದಾಗಿಹಡಗಿನ ಆಪರೇಟರ್ ಮಿತ್ಸುಯಿ ಒಎಸ್ಕೆ ಲೈನ್ಸ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಹಡಗಿನಲ್ಲಿ ಮೂರು ಸಾವಿರ ಟನ್‌ನಷ್ಟು ತೈಲವಿತ್ತು. ಹಡಗಿನ ಬೋರ್ಡ್‌ ಮೇಲೆ 90 ಟನ್‌ ತೈಲವಿತ್ತು. ಅಪಘಾತದ ನಂತರ ಮಾರಿಷಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT