ಶನಿವಾರ, ಡಿಸೆಂಬರ್ 4, 2021
20 °C

ನನ್ನ ಕುಟುಂಬ ಸದಸ್ಯರಿಗೂ ಭಾರತದ ಬಗ್ಗೆ ಒಲವು- ಟ್ರಂಪ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ನನ್ನಂತೆಯೇ ನನ್ನ ಪತ್ನಿ, ಪುತ್ರಿ ಇವಾಂಕಾ ಮತ್ತು ಪುತ್ರ ಟ್ರಂಪ್ ಜೂನಿಯರ್ ಕೂಡಾ ಭಾರತದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದು, ಚಿಂತನೆ ನಡೆಸಲಿದ್ದಾರೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ನನಗೆ ಭಾರತ ಗೊತ್ತಿದೆ. ಇವರನ್ನೂ (ಪತ್ನಿ, ಡೊನಾಲ್ಡ್ ಟ್ರಂಪ್ ಜೂನಿಯರ್, ಪುತ್ರಿ ಇವಾಂಕಾ) ಅರ್ಥಮಾಡಿಕೊಂಡಿದ್ದೇನೆ. ನನ್ನಂತೇ ಭಾರತದ ಜತೆಗಿನ ಬಾಂಧವ್ಯ ಅವರಿಗೂ ಚೆನ್ನಾಗಿದೆ’ ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಸ್ವತಃ ತಮ್ಮನ್ನು ಭಾರತ ಮತ್ತು ಭಾರತೀಯ ಅಮೆರಿಕನ್ನರ ಅತ್ಯುತ್ತಮ ಸ್ನೇಹಿತ ಎಂದು ಬಣ್ಣಿಸಿಕೊಂಡ ಟ್ರಂಪ್, ಈ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಕುಟುಂಬದ ಮೂವರು ಸದಸ್ಯರ ಪಾತ್ರದ ಕುರಿತ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಪತ್ನಿ ಕಿಂಬರ್ಲೆ, ಡೊನಾಲ್ಡ್ ಟ್ರಂಪ್ ಜೂನಿಯರ್, ಪುತ್ರಿ ಇವಾಂಕಾ ಟ್ರಂಪ್ ಅವರೂ ಭಾರತೀಯ ಅಮೆರಿಕನ್ನರಲ್ಲಿ ಜನಪ್ರಿಯರಾಗಿದ್ದು, ನಿಮ್ಮ ಪರ ಈ ಸಮುದಾಯದಲ್ಲಿ ಪ್ರಚಾರ ನಡೆಸಲಿದ್ದಾರೆಯೇ ಎಂದು ಟ್ರಂಪ್ ಅವರನ್ನು ಪ್ರಶ್ನಿಸಲಾಗಿತ್ತು.

ಅವರೂ (ಪತ್ನಿ, ಪುತ್ರ, ಪುತ್ರಿ) ಭಾರತವನ್ನು ಸಾಕಷ್ಟು ಸ್ಮರಿಸುತ್ತಾರೆ. ನಾನು ಭಾರತದ ಪ್ರಧಾನಿಯನ್ನು ಸಾಕಷ್ಟು ಸ್ಮರಿಸುತ್ತೇನೆ ಎಂದು ಟ್ರಂಪ್ ಪ್ರತಿಕ್ರಿಯಿಸಿದರು.

2016ರ ಚುನಾವಣೆಯಲ್ಲಿ ಟ್ರಂಪ್ ಕುಟುಂಬ ಭಾರತೀಯ ಅಮೆರಿಕನ್ನರ ಬೆಂಬಲ ಗಳಿಸುವಲ್ಲಿ ಶಕ್ತವಾಗಿತ್ತು. ಮುಖ್ಯವಾಗಿ  ವರ್ಜಿನಿಯಾ, ಪೆನ್ನಿಸಿಲ್ವೇನಿಯಾ, ಫ್ಲೋರಿಡಾ ರಾಜ್ಯಗಳಲ್ಲಿ ಇವಾಂಕಾ, ಡೊನಾಲ್ಡ್ ಟ್ರಂಪ್ ಜೂನಿಯರ್ ಪ್ರಚಾರ ಮಾಡಿದ್ದರು. ಈ ಪೈಕಿ ಇವಾಂಕಾ ಭಾರತದಲ್ಲಿ ಪ್ರವಾಸವನ್ನು ಮಾಡಿದ್ದಾರೆ. ಭಾರತದಲ್ಲಿ 2017ರಲ್ಲಿ ನಡೆದಿದ್ದ ಜಾಗತಿಕ ಉದ್ಯಮಿಗಳ ಶೃಂಗಸಭೆಗೆ ಬಂದಿದ್ದ ಉನ್ನತಾಧಿಕಾರಿಗಳ ನಿಯೋಗದ ನೇತೃತ್ವವನ್ನು ವಹಿಸಿದ್ದರು.

ಭಾರತಕ್ಕೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಿ ಇವಾಂಕಾ ಅಗಾಗ್ಗೆ ಟ್ವೀಟ್ ಮಾಡುತ್ತಾರೆ. ಭಾರತದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿರುವ ಇವಾಂಕಾ, ಅಧ್ಯಕ್ಷರ ವಿಶೇಷ ಸಲಹಗಾರ್ತಿಯೂ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು