ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಾಂತಿಗೆ ಪ್ರಚೋದನೆ ಆರೋಪ: ಆಂಗ್ ಸಾನ್ ಸೂಕಿ ವಿರುದ್ಧದ ತೀರ್ಪು ಡಿ.6ಕ್ಕೆ

Last Updated 6 ಡಿಸೆಂಬರ್ 2021, 6:58 IST
ಅಕ್ಷರ ಗಾತ್ರ

ಬ್ಯಾಂಕಾಕ್: ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ವಿರುದ್ಧದ ಸಾರ್ವಜನಿಕ ಅಶಾಂತಿಗೆ ಕಾರಣವಾದ ಪ್ರಕರಣಗಳಿಗೆ ಸಂಬಂಧಿಸಿದ ಮೊದಲ ಪ್ರಕರಣದಲ್ಲಿ ತೀರ್ಪನ್ನು ಮ್ಯಾನ್ಮಾರ್ ನ್ಯಾಯಾಲಯವು ಡಿ.6ಕ್ಕೆ ಕಾಯ್ದಿರಿಸಿದೆ ಎಂದು ವರದಿಯಾಗಿದೆ.

ಇಂದು ಪ್ರಕಟವಾಗಬೇಕಿದ್ದ ತೀರ್ಪನ್ನು ಕೋರ್ಟ್ 6 ದಿನ ಮುಂದೂಡಿದೆ ಎಂದು ಮೂಲವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಮ್ಯಾನ್ಮಾರ್‌ನಲ್ಲಾದ ಸೇನಾ ದಂಗೆಯಲ್ಲಿ ಬಂಧನಕ್ಕೀಡಾದ 76 ವರ್ಷದ ಸೂಕಿ ಅವರು 10 ಆರೋಪಗಳನ್ನು ಎದುರಿಸುತ್ತಿದ್ದು, ಗರಿಷ್ಠ 102 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಮ್ಯಾನ್ಮಾರ್‌ನ ರಾಜಧಾನಿ ನಯ್ಪಿಯಡೊದಲ್ಲಿ ಅವರ ವಿಚಾರಣೆಯನ್ನು ನ್ಯಾಯಾಲಯದ ಮುಚ್ಚಿದ ಕೊಠಡಿಗಳಲ್ಲಿ ನಡೆಸಲಾಗಿದೆ. ಸೂಕಿ ಪರ ವಾದಿಸಲು ಅವರ ಐವರೂ ವಕೀಲರಿಗೆ ಅಲ್ಲಿನ ನ್ಯಾಯಾಲಯ ನಿರ್ಬಂಧ ವಿಧಿಸಿದ್ದು, ಅವರ ಸಂವಹನಗಳು ‘ದೇಶವನ್ನು ಅಸ್ಥಿರಗೊಳಿಸಬಹುದು’ಎಂದು ಅದು ಹೇಳಿದೆ.

ಮಿಲಿಟರಿ ಬೆಂಬಲಿತ ಪಕ್ಷವನ್ನು ಸೋಲಿಸಿ ಸೂಕಿ ಪಕ್ಷವು ಪ್ರಚಂಡ ಗೆಲುವು ಪಡೆದ ವರ್ಷದ ನಂತರ ಈ ತೀರ್ಪು ಬರುತ್ತಿದೆ.

ಸೇನಾ ದಂಗೆ ನಡೆದು ಹಲವು ತಿಂಗಳುಗಳೇ ಆಗಿದ್ದರೂ ಸಹ ಈಗಲೂ ಜನರು ಬೀದಿಗಿಳಿದು ಮಿಲಿಟರಿ ಆಡಳಿತದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ವೈದ್ಯರು ಮತ್ತು ದಾದಿಯರು ಪ್ರತಿಭಟನಾರ್ಥವಾಗಿ ಕೆಲಸವನ್ನು ನಿಲ್ಲಿಸಿದ್ದಾರೆ. ‘ನಾಗರಿಕ ಅಸಹಕಾರ ಚಳವಳಿ’ನಡೆಯುತ್ತಿದ್ದು, ಅನೇಕರು ತೆರಿಗೆ ಪಾವತಿಸಲು ನಿರಾಕರಿಸಿದ್ದಾರೆ.

ಬಂಧನದ ಭೀತಿಯ ನಡುವೆಯೂ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಶಸ್ತ್ರ ಪ್ರತಿಭಟನಾಕಾರರು ಮತ್ತು ದಂಗೆಕೋರ ಗುಂಪುಗಳು ಸೇನೆಯ ವಿರುದ್ಧ ಹಿಟ್-ಅಂಡ್-ರನ್ ದಾಳಿಗಳನ್ನು ಪ್ರಾರಂಭಿಸುತ್ತಿದ್ದಾರೆ.
ಥಾಯ್ಲೆಂಡ್ ಮೂಲದ ಮಾನವ ಹಕ್ಕುಗಳ ಸಂಘಟನೆಯಾದ ಅಸಿಸ್ಟೆನ್ಸ್ ಅಸೋಸಿಯೇಶನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್ (ಬರ್ಮಾ) ಪ್ರಕಾರ, ಅಲ್ಲಿನ ಮಿಲಿಟರಿ ಆಡಳಿತವು 1,297 ಜನರನ್ನು ಕೊಂದಿದ್ದು, 10,500ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ.

ನಾಗರಿಕ ಹೋರಾಟದ ನಾಯಕರ ಗುಂಪಾದ ರಾಷ್ಟ್ರೀಯ ಏಕತಾ ಸರ್ಕಾರದ ಪ್ರಕಾರ, ತಮ್ಮ ಹೋರಾಟದ ವೆಚ್ಚಕ್ಕಾಗಿ ಬಾಂಡ್‌ಗಳನ್ನು ಮಾರಾಟ ಮಾಡುವ ಮೂಲಕ 6.3 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT