ಗುರುವಾರ , ಜೂನ್ 17, 2021
27 °C

ರಾಕೆಟ್‌ ಪತನ: ಚೀನಾ ವಿರುದ್ಧ ನಾಸಾ ಕಿಡಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅನಿಯಂತ್ರಿತ ರಾಕೆಟ್‌ವೊಂದು ಭಗ್ನಗೊಂಡು, ಅವಶೇಷಗಳು ಹಿಂದೂ ಮಹಾಸಾಗರದಲ್ಲಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭಾನುವಾರ ವಾಗ್ದಾಳಿ ನಡೆಸಿದೆ.

‘ತಾನು ಉಡಾವಣೆ ಮಾಡಿದ ರಾಕೆಟ್‌ ಭಗ್ನಗೊಂಡಿದೆ. ಬಾಹ್ಯಾಕಾಶ ಅವಶೇಷಗಳ ನಿರ್ವಹಣೆ ವಿಷಯದಲ್ಲಿ ಚೀನಾ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಲ್ಲಿ ವಿಫಲವಾಗಿದೆ’ ಎಂದು ನಾಸಾದ ಆಡಳಿತಾಧಿಕಾರಿ ಬಿಲ್‌ ನೆಲ್ಸನ್ ಹೇಳಿದರು.

ಚೀನಾದ ಲಾಂಗ್ ಮಾರ್ಚ್ 5 ಬಿ ರಾಕೆಟ್‌ನ ಭಗ್ನಾವಶೇಷವು ಭಾನುವಾರ ಭೂಮಿಯ ವಾತಾವರಣವನ್ನು ಪ್ರವೇಶಿಸಿದ್ದು, ಇದು ಮಾಲ್ಡೀವ್ಸ್‌ಗೆ ಸಮೀಪ ಹಿಂದೂ ಮಹಾಸಾಗರದಲ್ಲಿ ಬಿದ್ದಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ

‘ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದೇಶಗಳು ರಾಕೆಟ್‌, ಗಗನನೌಕೆಗಳ ನಿರ್ವಹಣೆ, ಅವುಗಳು ವಿಫಲಗೊಂಡು ಭೂಮಿಯತ್ತ ಮರಳುವ ವೇಳೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಳ್ಳಬೇಕು. ಇಂಥ ಸಂದರ್ಭಗಳಲ್ಲಿನ ಹಾನಿ ಅತ್ಯಂತ ಕಡಿಮೆ ಪ್ರಮಾಣದದಲ್ಲಿರುವಂತೆ  ಕ್ರಮ ಕೈಗೊಳ್ಳುವುದು ಮುಖ್ಯ’ ಎಂದು ಅವರು ಹೇಳಿದರು.

‘ಅಂತರಿಕ್ಷದ ಸುರಕ್ಷತೆ, ಸ್ಥಿರತೆ ಹಾಗೂ ಸುದೀರ್ಘ ಕಾಲದ ವರೆಗೆ ಸುಸ್ಥಿರತೆಯನ್ನು ಖಾತರಿಪಡಿಸುವುದು ಪ್ರತಿಯೊಂದು ದೇಶದ ಜವಾಬ್ದಾರಿಯಾಗಿರಬೇಕು’ ಎಂದೂ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು