ಬುಧವಾರ, ಜೂನ್ 29, 2022
24 °C

ಬಾಹ್ಯಾಕಾಶ ನಡಿಗೆ ಮುಂದೂಡಿದ ನಾಸಾ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಇಬ್ಬರು ಗಗನಯಾತ್ರಿಗಳು ಮಂಗಳವಾರ ನಡೆಸಲು ಉದ್ದೇಶಿಸಿದ್ದ ಬಾಹ್ಯಾಕಾಶ ನಡಿಗೆ ಕಾರ್ಯಕ್ರಮವನ್ನು ‘ನಾಸಾ’, ಅನಿರ್ದಿಷ್ಟಾವಧಿಗೆ ಮುಂದೂಡಿದೆ. 

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಹೊರಗೆ ಕಕ್ಷೆಯಲ್ಲಿ ಕಲ್ಮಶ ಇರುವುದನ್ನು ಗುರುತಿಸಿ, ಈ ಬಗ್ಗೆ ಕಕ್ಷೆ ಸಂಶೋಧನಾ ಪ್ರಯೋಗಾಲಯ ಸೂಚನೆ ನೀಡಿರುವುದು ಇದಕ್ಕೆ ಕಾರಣ. ಈ ಕುರಿತು ನಾಸಾ ಟ್ವೀಟ್ ಮಾಡಿದೆ.

ಗಗನಯಾತ್ರಿಗಳಾದ ಥಾಮಸ್‌ ಮಾರ್ಷ್‌ಬರ್ನ್ ಮತ್ತು ಕಾಯ್ಲಾ ಅವರು ದೋಷಯುಕ್ತ ಆ್ಯಂಟೆನಾವನ್ನು ಬದಲಿಸುವ ಉದ್ದೇಶದಿಂದ ಮಂಗಳವಾರ ಬಾಹ್ಯಾಕಾಶ ನಡಿಗೆ ಕೈಗೊಳ್ಳಲು ಉದ್ದೇಶಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು