ಬುಧವಾರ, ಜೂನ್ 29, 2022
24 °C

ಕೋವಿಡ್‌ ಲಸಿಕೆ: 100 ಕೋಟಿ ಡೋಸ್‌ ನೆರವಿನ ವಾಗ್ದಾನಕ್ಕೆ ಜಿ–7 ಶೃಂಗಸಭೆ ಸಜ್ಜು

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾರ್ಬಿಸ್‌ ಬೇ, ಬ್ರಿಟನ್‌: ಮೂರು ದಿನಗಳ ಕಾಲ ‘ಜಿ–7’ ಶೃಂಗಸಭೆ ಇಲ್ಲಿ ನಡೆಯಲಿದ್ದು, ವಿಶ್ವ ನಾಯಕರು ಕೋವಿಡ್‌–19 ವಿರುದ್ಧ ಹೋರಾಡುತ್ತಿರುವ ರಾಷ್ಟ್ರಗಳಿಗೆ ಲಸಿಕೆಯ 100 ಕೋಟಿ ಡೋಸ್‌ಗಳನ್ನು ಒದಗಿಸುವುದಾಗಿ ವಾಗ್ದಾನ ಮಾಡಲಿದ್ದಾರೆ.

ಈ ಪೈಕಿ, ಲಸಿಕೆಯ ಅರ್ಧದಷ್ಟು ಡೋಸ್‌ಗಳನ್ನು ಅಮೆರಿಕ ಒದಗಿಸಲಿದ್ದರೆ, ಬ್ರಿಟನ್‌ 10 ಕೋಟಿ ಡೋಸ್‌ಗಳನ್ನು ಒದಗಿಸಲಿದೆ ಎಂದು ಮೂಲಗಳು ಹೇಳಿವೆ.

ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ ಹಾಗೂ ಜಪಾನ್‌ನ ನಾಯಕರು ಸಹ ಪಾಲ್ಗೊಳ್ಳಲಿದ್ದು, ಕೋವಿಡ್‌ ಲಸಿಕೆ ನೀಡುವುದಕ್ಕೆ ಸಂಬಂಧಿಸಿ ಅವರು ಮಾಡುವ ಘೋಷಣೆಗೆ ಈ ಶೃಂಗಸಭೆ ಸಾಕ್ಷಿಯಾಗಲಿದೆ.

‘ವಿಶ್ವವನ್ನು ಕೋವಿಡ್‌–19 ಪಿಡುಗಿನಿಂದ ಮುಕ್ತಗೊಳಿಸಬೇಕಾಗಿದೆ. ಇದಕ್ಕಾಗಿ ನಮ್ಮ ಮಿತ್ರರಾಷ್ಟ್ರಗಳ ನೆರವಿನೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು