ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ರಕ್ಷಣಾ ಪಡೆಗಳನ್ನು ಕಳುಹಿಸುವ ಯೋಜನೆ ಇಲ್ಲ: ನ್ಯಾಟೊ ಸ್ಪಷ್ಟನೆ

Last Updated 24 ಫೆಬ್ರುವರಿ 2022, 12:39 IST
ಅಕ್ಷರ ಗಾತ್ರ

ಬ್ರಸೆಲ್ಸ್‌: 'ಉಕ್ರೇನ್‌ನೊಳಗೆ ನ್ಯಾಟೊದ ಸಶಸ್ತ್ರ ಪಡೆಗಳು ಇಲ್ಲ. ಅಲ್ಲದೇ, ಆ ದೇಶಕ್ಕೆ ಸೇನಾ ಪಡೆಯನ್ನು ರವಾನಿಸುವ ಯೋಜನೆಯನ್ನೂ ನಾವು ಹೊಂದಿಲ್ಲ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಈ ಸಂಗತಿ ಖಚಿತಪಡಿಸಿದ್ದಾರೆ.

‘ಉಕ್ರೇನ್‌ಗೆ ನ್ಯಾಟೊ ಪಡೆಗಳನ್ನು ನಿಯೋಜಿಸುವ ಯಾವುದೇ ಯೋಜನೆ ಮತ್ತು ಉದ್ದೇಶವನ್ನು ನಾವು ಹೊಂದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ’ ಎಂದು ಅವರು ಹೇಳಿದರು.

‘ಆದರೆ, ನ್ಯಾಟೊ ಸದಸ್ಯ ರಾಷ್ಟ್ರಗಳು ಮತ್ತು ನ್ಯಾಟೊ ಭೂಪ್ರದೇಶದ ಪೂರ್ವ ಭಾಗದಲ್ಲಿ ಸೇನಾ ಪಡೆಗಳ ಉಪಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಿದ್ದೇವೆ’ ಎಂದು ಸ್ಟೋಲ್ಟೆನ್‌ಬರ್ಗ್ ಮಾಹಿತಿ ನೀಡಿದ್ದಾರೆ.

ಉಕ್ರೇನ್ ಪಾಶ್ಚಾತ್ಯ ರಕ್ಷಣಾ ಒಕ್ಕೂಟದ ಪಾಲುದಾರ ರಾಷ್ಟ್ರ. ಆದರೆ ನ್ಯಾಟೊದ ಸದಸ್ಯ ರಾಷ್ಟ್ರವಲ್ಲ ಎಂದೂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT