ಶುಕ್ರವಾರ, ಜೂನ್ 18, 2021
22 °C

ನೇಪಾಳ: ಹೊಸ ಸರ್ಕಾರ ರಚನೆಗೆ ಅಧ್ಯಕ್ಷೆ ಆಹ್ವಾನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸರ್ಕಾರಕ್ಕೆ ವಿಶ್ವಾಸಮತ ಯಾಚನೆ ವೇಳೆ ಸೋಲುಂಟಾದ ನಂತರ ನೇಪಾಳ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಗುರುವಾರದೊಳಗೆ ಹೊಸ ಸರ್ಕಾರ ರಚಿಸುವಂತೆ ಬಹುಮತವಿರುವ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. 

ಒಲಿ ಆಡಳಿತ ವಿಶ್ವಾಸಮತ ಯಾಚನೆಯಲ್ಲಿ ಸೋಲನನುಭವಿಸಿದ ನಂತರ ನೇಪಾಳದ ಸಂವಿಧಾನದ 76 (2)ನೇ ವಿಧಿಯ ಅನ್ವಯ ಅಧ್ಯಕ್ಷೆ ಭಂಡಾರಿ ಅವರು ಹೊಸ ಸರ್ಕಾರ ರಚನೆಗೆ ಬಹುತವಿರುವ ಪಕ್ಷಗಳನ್ನು ಆಹ್ವಾನಿಸಲು ನಿರ್ಧರಿಸಿದರು ಎಂದು ರಾಷ್ಟ್ರಪತಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂವಿಧಾನಿಕ ನಿಬಂಧನೆಯ ಪ್ರಕಾರ, ಸರ್ಕಾರ ರಚಿಸುವ ಪಕ್ಷವು ಸಂಸತ್ತಿನಲ್ಲಿ ಎರಡು ಅಥವಾ ಹೆಚ್ಚಿನ ರಾಜಕೀಯ ಪಕ್ಷಗಳಿಗೆ ಸೇರಿದ ಶಾಸಕರ ಸಹಿಯನ್ನುನಿಗದಿತ ಸಮಯದೊಳಗೆ ಅಧ್ಯಕ್ಷರ ಕಚೇರಿಗೆ ಸಲ್ಲಿಸಬೇಕಾಗುತ್ತದೆ.

ನೇಪಾಳಿ ಕಾಂಗ್ರೆಸ್‌ನಿಂದ ಸರ್ಕಾರ ರಚನೆಗೆ ಪ್ರಯತ್ನ?: ಅಧ್ಯಕ್ಷರ ಸೂಚನೆಯಂತೆ ವಿರೋಧ ಪಕ್ಷಗಳು ಇದೀಗ ಸರ್ಕಾರ ರಚನೆಯ ಪ್ರಯತ್ನಕ್ಕೆ ಮುಂದಾಗಿದ್ದು, ಮುಂಚೂಣಿಯಲ್ಲಿ ನೇಪಾಳಿ ಕಾಂಗ್ರೆಸ್‌ ಇದೆ. ನೇಪಾಳಿ ಕಾಂಗ್ರೆಸ್‌ ಸರ್ಕಾರ ರಚನೆಗೆ ಮುಂದಾದರೆ ಅದಕ್ಕೆ ಬೆಂಬಲ ನೀಡುವುದಾಗಿ ಜನತಾ ಸಮಾಜವಾದಿ ಪಕ್ಷ ಮತ್ತು ಸಿಪಿಎನ್‌ ಪಕ್ಷಗಳು ಘೋಷಿಸಿವೆ.

ಸದ್ಯ ಸಂಸತ್ತಿನಲ್ಲಿ ಅಧಿಕ ಸಂಖ್ಯಾ ಬಲ ಇರುವುದು ಕೆ.ಪಿ.ಶರ್ಮಾ ಒಲಿ ಅವರಿಗೇ. ಮತ್ತೊಮ್ಮೆ ಅವರನ್ನೇ ನೇಮಕ ಮಾಡಿದರೆ 30 ದಿನದೊಳಗೆ ಅವರು ಮತ್ತೆ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು