ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ 10,258 ಜನರಿಗೆ ಸೋಂಕು; ಕೋವಿಡ್‌ ಆರಂಭವಾದಾಗಿನಿಂದ ಗರಿಷ್ಠ ಪ್ರಕರಣ

Last Updated 18 ಜನವರಿ 2022, 15:29 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದಲ್ಲಿ ಕೋವಿಡ್‌ ದೃಢಪಟ್ಟ ಬರೋಬ್ಬರಿ10,258 ಹೊಸ ಪ್ರಕರಣಗಳು ಮಂಗಳವಾರ ವರದಿಯಾಗಿದ್ದು, ಇದು ಈ ದೇಶದಲ್ಲಿ ಕೋವಿಡ್‌ ಕಾಣಿಸಿಕೊಂಡಾಗಿನಿಂದ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ.

ಸಾಂಕ್ರಾಮಿಕದ ಎರಡನೇ ಅಲೆ ಸಂದರ್ಭದಲ್ಲಿ 2021ರ ಮೇ11ರಂದು 9,483 ಪ್ರಕರಣಗಳು ಪತ್ತೆಯಾಗಿದ್ದವು. ಅದು ಈವರೆಗೆ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಪ್ರಕರಣವೆನಿಸಿತ್ತು.

ಕಳೆದ24 ಗಂಟೆ ಅವಧಿಯಲ್ಲಿ ಪರೀಕ್ಷೆಗೊಳಪಡಿಸಿರುವ ಒಟ್ಟು ಮಾದರಿಗಳ ಪೈಕಿಶೇ 44.94 ರಷ್ಟು ಪಾಸಿಟಿವ್‌ ವರದಿ ಬಂದಿವೆ ಎಂದು ಆರೋಗ್ಯಸಚಿವಾಲಯದ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಇದರೊಂದಿಗೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ.

ಕಠ್ಮಂಡುವಿನಲ್ಲಿ4,004, ಲಲಿತ್‌ಪುರ್‌975 ಮತ್ತು ಭಕ್ತಪುರ್‌ನಲ್ಲಿ570 ಪ್ರಕರಣಗಳು ದೃಢಪಟ್ಟಿವೆ.

ಕಳೆದ24 ಗಂಟೆಗಳಲ್ಲಿ547 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ11,624ಕ್ಕೆ ಏರಿಕೆಯಾಗಿದೆ.

ಸದ್ಯ ದೇಶದಲ್ಲಿ39,044 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT