ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟೆಗೆ 600 ಕಿಮೀ. ವೇಗ: ಚೀನಾದಲ್ಲಿ ಬಂತು ಹೊಸ ರೈಲು

Last Updated 20 ಜುಲೈ 2021, 9:45 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದಲ್ಲಿ ಮಂಗಳವಾರ ಹೊಸ ಮ್ಯಾಗ್ಲೆವ್ ರೈಲಿನ ಪರೀಕ್ಷಾರ್ಥ ಚಾಲನೆ ನಡೆಸಲಾಗಿದ್ದು, ಗಂಟೆಗೆ 600 ಕಿ.ಮೀ. ವೇಗದಲ್ಲಿ ರೈಲು ಸಾಗಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಚೀನಾ, ಸ್ವತಃ ಈ ಅತಿವೇಗದ ರೈಲನ್ನು ಅಭಿವೃದ್ಧಿಪಡಿಸಿದ್ದು, ಕರಾವಳಿ ನಗರಿ ಕಿಂಗ್ಡೋದಲ್ಲಿ ನಿರ್ಮಾಣ ಮಾಡಲಾಗಿದೆ.

ವಿದ್ಯುತ್-ಕಾಂತೀಯ ಬಲದಿಂದ ಚಲಿಸುವ ‘ಲೆವಿಟೇಟ್ಸ್’ ಮ್ಯಾಗ್ಲೆವ್ ರೈಲು ಪ್ರಸ್ತುತ ಬಳಕೆಯಲ್ಲಿರುವ ರೈಲುಗಳ ಪೈಕಿ ಗರಿಷ್ಠ ವೇಗದ ರೈಲಾಗಿದೆ.

ಕಳೆದ ಎರಡು ದಶಕಗಳಿಂದ ಚೀನಾ ಸೀಮಿತ ಪ್ರದೇಶಗಳಲ್ಲಿ ಕಾಂತೀಯ ಬಲದಿಂದ ಚಲಿಸುವ ರೈಲುಗಳನ್ನು ಬಳಕೆ ಮಾಡುತ್ತಿದೆ.

ಮುಂದೆ ಶಾಂಘೈ ಮತ್ತು ಚೆಂಗ್ಡು ಪ್ರದೇಶಗಳಲ್ಲಿ ಕೂಡ ಚೀನಾ ಮ್ಯಾಗ್ಲೆವ್ ರೈಲು ಸೇವೆ ಪರಿಶೀಲಿಸಲಿದೆ.

ಗಂಟೆಗೆ 600 ಕಿಮೀ. ವೇಗದಲ್ಲಿ ಎಂದರೆ, ಬೀಜಿಂಗ್‌ನಿಂದ ಶಾಂಘೈಗೆ ತಲುಪಲು ಮ್ಯಾಗ್ಲೆವ್ ರೈಲಿನಲ್ಲಿ 2.5 ಗಂಟೆ ಸಾಕಾಗುತ್ತದೆ. ಈ ಎರಡು ನಗರಗಳ ನಡುವೆ 1,000 ಕಿ.ಮೀ. ಅಂತರವಿದೆ. ಹೋಲಿಕೆ ಮಾಡಿ ನೋಡಿದರೆ ವಿಮಾನದಲ್ಲಿ 3 ಗಂಟೆ ಮತ್ತು ಹೈಸ್ಪೀಡ್ ರೈಲಿನಲ್ಲಾದರೆ 5.5 ಗಂಟೆ ತಗಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT