ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಒನ್‌ ಚೀನಾ' ನೀತಿಯಲ್ಲಿ ಬದಲಾವಣೆ ಇಲ್ಲ: ಶ್ವೇತ ಭವನ

Last Updated 21 ಸೆಪ್ಟೆಂಬರ್ 2022, 12:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಒಂದು ವೇಳೆ ಚೀನಾವು ತೈವಾಲ್‌ ಮೇಲೆ ಆಕ್ರಮಣ ಮಾಡಿದರೆ, ಅಮೆರಿಕವು ತೈವಾನ್‌ ಬೆಂಬಲಕ್ಕೆ ನಿಲ್ಲಲಿದೆ’ ಎಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಹೇಳಿಕೆಯನ್ನು ಶ್ವೇತ ಭವನ ಸಮರ್ಥಿಸಿಕೊಂಡಿದೆ.

ಜೊತೆಗೆ ಅಮೆರಿಕ ‘ಒನ್‌ ಚೀನಾ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂಬ ಬೈಡನ್‌ ಅವರು ಹೇಳಿಕೆಯನ್ನೂ ಶ್ವೇತಭವನ ಸಮರ್ಥಿಸಿದೆ.

ಅಮೆರಿಕದ ಭದ್ರತಾ ಸಲಹೆಗಾರ ಜಾಕ್‌ ಸುಲೈವಿಯನ್‌ ಅವರು ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಒನ್‌ ಚೀನಾ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರೊಂದಿಗೆ ತೈವಾನ್‌ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪನೆಗಾಗಿ, ತೈವಾನ್‌ನನ್ನೂ ಬೆಂಬಲಿಸುತ್ತೇವೆ’ ಎಂದರು.

‘ತೈವಾನ್‌ ಕುರಿತು ಊಹಾತ್ಮಕ ಪ್ರಶ್ನೆ ಕೇಳುತ್ತಿದ್ದೀರಿ. ಅದಕ್ಕಷ್ಟೇ ಉತ್ತರಿಸುತ್ತಿದ್ದೇನೆ ಎಂದು ಬೈಡನ್‌ ಅವರು ಸಂದರ್ಶನದಲ್ಲೂ ಹೇಳಿದ್ದಾರೆ. ಒಂದು ವೇಳೆ ಒನ್‌ ಚೀನಾ ನೀತಿಯಲ್ಲಿ ಬದಲಾವಣೆಯಾದರೆ, ಬೈಡನ್‌ ಅವರು ತಾವಾಗಿಯೇ ಈ ವಿಷಯ ಬಹಿರಂಗಪಡಿಸುತ್ತಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT