ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದ ಭವಿಷ್ಯ ಊಹಿಸಲು ಅಸಾಧ್ಯ: ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ

Last Updated 15 ಮೇ 2022, 2:48 IST
ಅಕ್ಷರ ಗಾತ್ರ

ಕೀವ್: ‘ರಷ್ಯಾದ ಆಕ್ರಮಣಕಾರರನ್ನು ಹೊರದಬ್ಬಲು ಉಕ್ರೇನಿಗರು ಎಲ್ಲವನ್ನೂ ಮಾಡುತ್ತಿದ್ದಾರೆ. ಆದರೆ ಈ ಯುದ್ಧವು ಎಲ್ಲಿಯವರೆಗೆ ಮುಂದುವರಿಯಬಹುದೆಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ’ ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದರು.

ಶುಕ್ರವಾರ ತಡರಾತ್ರಿ ದೇಶದ ಜನತೆ ಉದ್ದೇಶಿಸಿ ವಿಡಿಯೊ ಭಾಷಣ ಮಾಡಿದ ಅವರು,‘ನಮ್ಮ ಪ್ರತಿರೋಧದುರದೃಷ್ಟವಶಾತ್‌ ದೇಶದ ಜನತೆಯನ್ನಷ್ಟೇ ಅವಲಂಬಿಸಿಲ್ಲ. ಜನರು ಈಗಾಗಲೇ ಗರಿಷ್ಠ ಕೊಡುಗೆ ನೀಡಿದ್ದಾರೆ. ಈಗ ಇದು ನಮ್ಮ ಮಿತ್ರ ರಾಷ್ಟ್ರಗಳು, ಯುರೋಪ್‌ ಒಕ್ಕೂಟ, ಇಡೀ ವಿಶ್ವದ ಮೇಲೆ ಅವಲಂಬಿತವಾಗಿದೆ’ ಎಂದರು.

ಉಕ್ರೇನ್‌ ರಕ್ಷಣಾ ಸಚಿವ ಒಲೆಕ್ಸಿ ರೆಜಿನಿಕೋವ್, ‘ಈ ಯುದ್ಧ ಶೀಘ್ರ ಅಂತ್ಯವಾಗುವುದಿಲ್ಲ. ನಾವು ಯುದ್ಧದ ಹೊಸ ಮತ್ತು ಸುದೀರ್ಘದ ಹಂತ ಪ್ರವೇಶಿಸುತ್ತಿದ್ದೇವೆ’ ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT