ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಯಾವ ಪ್ರಧಾನಿಗೂ ಸಿಗಲಿಲ್ಲ ಐದು ವರ್ಷಗಳ ಅಧಿಕಾರ 

Last Updated 10 ಏಪ್ರಿಲ್ 2022, 6:27 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: 1947ರಲ್ಲಿ ಪಾಕಿಸ್ತಾನಅಸ್ತಿತ್ವಕ್ಕೆ ಬಂದ ನಂತರ ಈವರೆಗೆ ಯಾವುದೇ ಚುನಾಯಿತ ಪ್ರಧಾನ ಮಂತ್ರಿಗಳು ತಮ್ಮ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ. ಸದ್ಯ ಈ ಪಟ್ಟಿಗೆ ಹೊಸ ಸೇರ್ಪಡೆ ಇಮ್ರಾನ್ ಖಾನ್.

ಇದರ ಜತೆಗೇ, ಅವಿಶ್ವಾಸ ನಿರ್ಣಯದಂಥ ಸಾಂವಿಧಾನಿಕ ಕ್ರಮದ ಮೂಲಕಪದಚ್ಯುತಗೊಂಡಮೊದಲ ಪ್ರಧಾನ ಮಂತ್ರಿಯೂ ಇಮ್ರಾನ್‌ ಖಾನ್‌ ಅವರೇ.

ದೇಶದ ಮೊದಲ ಪ್ರಧಾನಿ ಲಿಯಾಖತ್ ಅಲಿ ಖಾನ್ ಅವರನ್ನು ಅಕ್ಟೋಬರ್ 16, 1951 ರಂದು ಹತ್ಯೆ ಮಾಡಲಾಯಿತು. ಅವರ ನಂತರದ ಏಳು ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಿ, ಅಧಿಕಾರದಿಂದ ಕೆಳಗಿಳಿದು ಹೋದರು. ಐವರು ಪ್ರಧಾನಿಗಳು ವಜಾಗೊಂಡಿದ್ದಾರೆ. ಆದರೆ ನಾಲ್ಕು ಪ್ರಧಾನ ಮಂತ್ರಿಗಳ ಸರ್ಕಾರಗಳು ಮಿಲಿಟರಿ ದಂಗೆಗಳ ಮೂಲಕ ಪತನಗೊಂಡಿವೆ. ನವಾಜ್ ಷರೀಫ್ ಮತ್ತು ಯೂಸುಫ್ ರಾಜಾ ಗಿಲಾನಿ ಅವರು ಸುಪ್ರೀಂ ಕೋರ್ಟ್‌ನಿಂದ ಶಿಕ್ಷೆಗೊಳಗಾದ ಕಾರಣ ಅನರ್ಹಗೊಂಡು ಅಧಿಕಾರದಿಂದ ಕೆಳಗಿಳಿದಿದ್ದಾರೆ.

ಶೌಕತ್ ಅಜೀಜ್, ರಾಜಾ ಪರ್ವೇಜ್ ಅಶ್ರಫ್ ಮತ್ತು ಶಾಹಿದ್ ಖಾಕನ್ ಅಬ್ಬಾಸಿ ಅವರು ಚುನಾಯಿತ 'ರಾಷ್ಟ್ರೀಯ ಅಸೆಂಬ್ಲಿ'ಯ ಪೂರ್ಣಾವಧಿಯ ನಂತರಪ್ರಧಾನಿ ಹುದ್ದೆತ್ಯಜಿಸಿದ್ದರು. ಆದರೆಇವರೆಲ್ಲರೂನಾನಾ ಕಾರಣಕ್ಕೆ ತೆರವಾಗಿದ್ದ ಪ್ರಧಾನಿಸ್ಥಾನವನ್ನು ಅಲಂಕರಿಸಿದವರಷ್ಟೇ ಆಗಿದ್ದರು.

ನವಾಜ್ ಷರೀಫ್ ನಾಲ್ಕು ಬಾರಿ ದೇಶದ ಉನ್ನತ ಹುದ್ದೆಯನ್ನು ತೊರೆದಿದ್ಧಾರೆ. ಆದರೂ, ಪಾಕಿಸ್ತಾನದಲ್ಲಿ ದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದವರುನವಾಜ್‌ ಷರೀಫ್ ಮಾತ್ರ. ಅವರು ಒಟ್ಟಾರೆ3,422 ದಿನಗಳನ್ನು ಪ್ರಧಾನಿ ಕಾರ್ಯಾಲಯದಲ್ಲಿ ಕಳೆದಿದ್ದಾರೆ. ನಂತರದ ಸ್ಥಾನದಲ್ಲಿ ಬೆನಜೀರ್ ಭುಟ್ಟೊ, ಲಿಯಾಖತ್ ಅಲಿ ಖಾನ್, ಯೂಸುಫ್ ರಜಾ ಗಿಲಾನಿ ಮತ್ತು ಜುಲ್ಫಿಕರ್ ಅಲಿ ಭುಟ್ಟೊ ಅತಿ ಹೆಚ್ಚು ದಿನ ಪ್ರಧಾನಿಯಾಗಿದ್ದರು. ಇಮ್ರಾನ್‌ ಖಾನ್‌ ಅವರು 1335 ದಿನ ಪ್ರಧಾನಿ ಸ್ಥಾನದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT