ಭಯಭೀತಿಗೊಳ್ಳುವ ಅಗತ್ಯವಿಲ್ಲ: ಕೋವಿಡ್-19 ಹೊಸ ಸ್ವರೂಪದ ಬಗ್ಗೆ ಡಬ್ಲ್ಯುಎಚ್‌ಒ

ಜಿನೀವಾ: ಬ್ರಿಟನ್‌ನಲ್ಲಿ ಹೊರಹೊಮ್ಮಿರುವ ಕೊರೊನಾ ವೈರಸ್ ಹೊಸ ಸ್ವರೂಪದ ಬಗ್ಗೆ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ), ಭಯಭೀತಿಗೊಳ್ಳುವ ಅಗತ್ಯವಿಲ್ಲ, ಇದು ಸಾಂಕ್ರಾಮಿಕ ರೋಗ ವಿಕಸನದ ಸಹಜ ಭಾಗವಾಗಿದೆ ಎಂದು ಹೇಳಿದೆ.
ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ ಹೊಸ ಸ್ವರೂಪವು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಯುರೋಪ್ ರಾಷ್ಟ್ರದ ಹಲವು ರಾಷ್ಟ್ರಗಳು ಪ್ರಯಾಣ ನಿರ್ಬಂಧವನ್ನು ಹೇರಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಮೈಕ್ ರಯಾನ್, ನಾವು ಸಮತೋಲನವನ್ನು ಕಾಪಾಡಬೇಕು. ಪಾರದರ್ಶಕತೆ ಬಹಳ ಮುಖ್ಯ. ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅತ್ಯಗತ್ಯ. ಆದರೆ ಇದು ವೈರಸ್ ವಿಕಾಸದ ಸಾಮಾನ್ಯ ಭಾಗವಾಗಿದೆ ಎಂದು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Covid-19 World Update: ಫೈಝರ್ ಕೋವಿಡ್ ಲಸಿಕೆ ಪಡೆದ ಜೋ ಬೈಡನ್
ಸೂಕ್ಷ್ಮವಾಗಿ ಎಚ್ಚರಿಕೆಯಿಂದ ಪರಿಶೀಲಿಸಲು ಸಾಧ್ಯವಾಗುವುದರಿಂದ, ವೈಜ್ಞಾನಿಕವಾಗಿ ಜಾಗತಿಕ ಆರೋಗ್ಯಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿದೆ. ಅಲ್ಲದೆ ವೈರಸ್ ಮೇಲೆ ನಿಕಟ ವೀಕ್ಷಣೆ ಇರಿಸಿರುವ ರಾಷ್ಟ್ರಗಳನ್ನು ಶ್ಲಾಘಿಸಬೇಕು ಎಂದು ಹೇಳಿದರು.
ಈಗಿನ ವೈರಸ್‌ಗಿಂತ ಮಾರಕವಲ್ಲ
ಬ್ರಿಟನ್ ಅಂಕಿಅಂಶಗಳನ್ನು ಉಲ್ಲೇಖಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು, ಕೊರೊನಾ ವೈರಸ್ ಹೊಸ ಸ್ವರೂಪವು ಈಗಿನ ವೈರಸ್‌ಗಿಂತಲೂ ಹೆಚ್ಚು ಮಾರಕವಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಹೇಳಿದೆ.
ಜನರನ್ನು ಹೆಚ್ಚು ರೋಗಿಗಳನ್ನಾಗಿ ಮಾಡಿದೆ ಅಥವಾ ಅಸ್ತಿತ್ವದಲ್ಲಿರುವ ಕೋವಿಡ್-19 ಸಾಂಕ್ರಾಮಿಕ ರೋಗಕ್ಕಿಂತಲೂ ಮಾರಕವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮೈಕ್ ರಯಾನ್ ಹೇಳಿದರು.
ಇದನ್ನೂ ಓದಿ: ರಷ್ಯಾದಲ್ಲಿಯೂ ಕೊರೊನಾ ಸೋಂಕು ಹೆಚ್ಚಳ: ಇದು ವೈರಸ್ನ ಹೊಸ ಪ್ರಬೇಧವೇ?
ಕೊರೊನಾ ವೈರಸ್ ಹೊಸ ರೂಪಾಂತರಗಳು ಸಂಭವಿಸುವುದು ಸಹಜವಾಗಿದೆ. ಈ ನಿಟ್ಟಿನಲ್ಲಿ ಪ್ರಯಾಣ ನಿರ್ಬಂಧಗಳನ್ನು ಹೇರುವ ಮೂಲಕ ಹಲವು ರಾಷ್ಟ್ರಗಳು ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳುವುದು ಶ್ಲಾಘನೀಯವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ಹೊಸ ಸ್ವರೂಪದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚು ನಿಖರ ಹಾಗೂ ಸಮಗ್ರ ಮಾಹಿತಿಯನ್ನು ನೀಡುವ ನಿರೀಕ್ಷೆಯಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.