ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

ಅಮೆರಿಕ ಎಚ್ಚರಿಕೆ
Last Updated 26 ಮಾರ್ಚ್ 2021, 11:59 IST
ಅಕ್ಷರ ಗಾತ್ರ

ಸೋಲ್‌:ಪೂರ್ವ ಕರಾವಳಿಯಲ್ಲಿ ಹೊಸ ಕ್ಷಿಪಣಿಯನ್ನು ಪರೀಕ್ಷಿಸಲಾಗಿದೆ ಎಂದು ಉತ್ತರ ಕೊರಿಯಾ ಶುಕ್ರವಾರ ತಿಳಿಸಿದೆ.

ಉತ್ತರ ಕೊರಿಯಾವು ಪೂರ್ವ ಕರಾವಳಿಯಲ್ಲಿ ಎರಡು ನೂತನ ಮಾದರಿಯ ಯುದ್ಧತಂತ್ರವನ್ನು ಒಳಗೊಂಡ ಕ್ಷಿಪಣಿಗಳ ಪರೀಕ್ಷೆಯನ್ನು ಗುರುವಾರ ನಡೆಸಿದೆ. ಉತ್ತರ ಕೊರಿಯಾದ ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆಯ ರೊಡಾಂಗ್ ಸಿನ್ಮುನ್ ಪತ್ರಿಕೆಯು ಈ ಬಗ್ಗೆ ತಿಳಿಸಿದೆ. ಅಲ್ಲದೆ ತನ್ನ ವೆಬ್‌ಸೈಟ್‌ನಲ್ಲಿ ಇದರ ಫೋಟೊಗಳನ್ನು ಹಂಚಿಕೊಂಡಿದೆ.

‘ಉತ್ತರ ಕೊರಿಯಾದ ಸೇನಾ ಶಕ್ತಿಯನ್ನು ಹೆಚ್ಚಿಸಲು ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದು ಕ್ಷಿಪಣಿ ಪ್ರಯೋಗದ ಮೇಲ್ವಿಚಾರಕ ರಿ ಪ್ಯಾಂಗ್‌ ಚೋಲ್‌ ತಿಳಿಸಿದ್ದಾರೆ.

‘ಗುರುವಾರ ಪರೀಕ್ಷಿಸಿದ ಎರಡೂ ಶಸ್ತ್ರಾಸ್ತ್ರಗಳು ಖಂಡಾಂತರ ಕ್ಷಿಪಣಿಗಳಾಗಿವೆ. ಈ ಕ್ಷಿಪಣಿಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಬಂಧಿಸಿತ್ತು’ ಎಂದು ಜಪಾನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉದ್ವಿಗ್ನ ಪ‍ರಿಸ್ಥಿತಿ ಸೃಷಿಸಿದರೆ ಅದರ ಪರಿಣಾಮ ಎದುರಿಸಲು ಉತ್ತರ ಕೊರಿಯಾ ಸಿದ್ಧವಿರಲಿ ಎಂದು ಜೋ ಬೈಡನ್‌ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT