ಸೋಲ್: ಉತ್ತರ ಕೊರಿಯಾ ಸಂಪೂರ್ಣವಾಗಿ ಕೊರೊನಾ ವೈರಸ್‌ನಿಂದ ಮುಕ್ತವಾಗಿದೆ ಎಂದು ಪ್ರತಿಪಾದಿಸಿರುವುದನ್ನು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವರು ಪ್ರಶ್ನಿಸಿರುವುದಕ್ಕೆ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರಿ ಕಿಡಿಕಾರಿದ್ದಾರೆ.

ದಕ್ಷಿಣ ಕೊರಿಯಾಗೆ ತಿರುಗೇಟು ನೀಡಿರುವಕಿಮ್ ಯೋ ಯಂಗ್, ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.

‘ಉತ್ತರ ಕೊರಿಯಾದಲ್ಲಿ ಒಂದೂ ಕೊರೊನಾ ಪ್ರಕರಣಗಳಿಲ್ಲ ಎಂಬ ವಿಷಯವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಉತ್ತರ ಕೊರಿಯಾವು ಕೊರೊನಾ ಪಿಡುಗನ್ನು ಜಂಟಿಯಾಗಿ ನಿಭಾಯಿಸುವ ಪ್ರಸ್ತಾವ ಕೂಡ ತಳ್ಳಿ ಹಾಕಿತ್ತು' ಎಂದು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವೆ ಕಾಂಗ್ ಕ್ಯುಂಗ್-ವಾ ಅವರು ಹೇಳಿದ್ದರು.

‘ಕೊರೊನಾ ವೈರಸ್ ಉತ್ತರ ಕೊರಿಯಾವನ್ನು ಇನ್ನಷ್ಟು ಗೌಪ್ಯವನ್ನಾಗಿ ಮಾಡಿದೆ. ಮುಂದಿನ ದಿನಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಬಗೆಗಿನ ಚರ್ಚೆ ಇನ್ನಷ್ಟು ಕಡಿಮೆಯಾಗಲಿದೆ. ಆದರೂ ಅವರು ನಮ್ಮಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಇಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಕೊರಿಯಾದ ಅಧ್ಯಕ್ಷರ ಸಹೋದರಿ ಕಿಮ್ ಯೋ ಜಾಂಗ್ ಅವರು,‘ ಸಂಭವನೀಯ ಪರಿಣಾಮದ ಬಗ್ಗೆ ಯೋಚಿಸದೆ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದು ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.