ಕೇಪ್ ಕ್ಯಾನವೆರೆಲ್, ಅಮೆರಿಕ (ಎಪಿ): ಸುಮಾರು 40 ವರ್ಷಗಳ ಕಾಲ ಭೂಮಿಯನ್ನು ಸುತ್ತಿದ್ದ ನಾಸಾದ ನಿಷ್ಕ್ರಿಯ ಉಪಗ್ರಹವೊಂದು ಅಲಾಸ್ಕಾ ಕರಾವಳಿಯಲ್ಲಿ ಸುರಕ್ಷಿತವಾಗಿ ಪತನಗೊಂಡಿದೆ.
1984ರಲ್ಲಿ ಕಕ್ಷೆಗೆ ಕಳುಹಿಸಲಾಗಿದ್ದ ಉಪಗ್ರಹವು ಭಾನುವಾರ ತಡರಾತ್ರಿ ಬೇರಿಂಗ್ ಸಮುದ್ರದಲ್ಲಿ ಪತನಗೊಂಡಿತು. ಇದರಿಂದ ಯಾವುದೇ ಹಾನಿಯಾದ ಬಗ್ಗೆ ಅಥವಾ ಭಗ್ನಾವಶೇಷಗಳು ಲಭ್ಯವಾದ ಬಗ್ಗೆ ವರದಿ ಇಲ್ಲ ಎಂದು ನಾಸಾದ ಪ್ರಕಟಣೆ ತಿಳಿಸಿದೆ.
2,450 ಕೆ.ಜಿ. ತೂಕದ ಉಪಗ್ರಹ ಭೂಮಿಗೆ ಸಾಗುವ ಹಾದಿಯಲ್ಲಿ ಬಾಹ್ಯಾಕಾಶದಲ್ಲಿಯೇ ಭಸ್ಮಗೊಳ್ಳುವ ಸಾಧ್ಯತೆ ಇದೆ ಎಂದು ನಾಸಾ ಕಳೆದ ವಾರ ತಿಳಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.