ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯ ಬೂಸ್ಟರ್‌ ಡೋಸ್‌ ಪಡೆದವರಿಗೂ ಓಮೈಕ್ರಾನ್‌ ಸೋಂಕು

Last Updated 10 ಡಿಸೆಂಬರ್ 2021, 4:45 IST
ಅಕ್ಷರ ಗಾತ್ರ

ಸಿಂಗಪುರ: ಸಿಂಗಪುರದಲ್ಲಿ ಕೋವಿಡ್‌ನ ಎರಡು ಲಸಿಕೆಗಳ ಜತೆಗೆ, ಬೂಸ್ಟರ್‌ ಲಸಿಕೆಯನ್ನೂ ಪಡೆದಿದ್ದ ಇಬ್ಬರಿಗೆ ಓಮೈಕ್ರಾನ್‌ ಸೋಂಕು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಹೀಗಾಗಿ ಕೋವಿಡ್‌ ವಿರುದ್ಧ ಮೂರನೇ ಡೋಸ್‌ ಲಸಿಕೆ ನೀಡಬಹುದಾದ ರಕ್ಷಣೆಯ ಬಗ್ಗೆ ಅನುಮಾನಗಳು ಮೂಡಿವೆ.

ವಿಮಾನ ನಿಲ್ದಾಣವೊಂದರಲ್ಲಿ ಪ್ರಯಾಣಿಕ-ಸೇವಾ ವಿಭಾಗದಲ್ಲಿ ಕೆಲಸ ಮಾಡುವ 24 ವರ್ಷದ ಮಹಿಳೆಗೆ ಓಮೈಕ್ರಾನ್‌ ಇರುವುದು ಪತ್ತೆಯಾಗಿದೆ. ಇದು ಸಿಂಗಪುರದ ಒಳನಾಡಿನಲ್ಲಿ ಪತ್ತೆಯಾದ ಮೊದಲ ಓಮೈಕ್ರಾನ್‌ ಎಂದು ಪರಿಗಣಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ. ಜರ್ಮನಿಯಿಂದ ಸಿಂಗಪುರಕ್ಕೆ ಬಂದ ವ್ಯಕ್ತಿಯೊಬ್ಬರಲ್ಲಿಯೂ ಓಮೈಕ್ರಾನ್‌ ಸೋಂಕು ಕಾಣಿಸಿಕೊಂಡಿದೆ. ಇವರಿಬ್ಬರು ಲಸಿಕೆ ಪೂರ್ಣ ಡೋಸ್‌ನ ಜತೆಗೆ ಬೂಸ್ಟರ್‌ (ಮೂರನೇ) ಡೋಸ್‌ ಕೂಡ ಪಡೆದಿದ್ದರು ಎಂದು ಸುದ್ದಿ ಸಂಸ್ಥೆ ‘ಬ್ಲೂಮ್‌ಬರ್ಗ್‌’ ವರದಿ ಮಾಡಿದೆ.

ಓಮೈಕ್ರಾನ್ ರೂಪಾಂತರವನ್ನು ತಟಸ್ಥಗೊಳಿಸಲು ಲಸಿಕೆಯ ಮೂರನೇ ಡೋಸ್ ಅಗತ್ಯವೆಂಬುದು ಅಧ್ಯಯನಗಳಿಂದ ಗೊತ್ತಾಗಿದೆ ಎಂದು ಫೈಜರ್‌ ಮತ್ತು ಬಯೋಎನ್‌ಟೆಕ್ ಈ ಮೊದಲು ಹೇಳಿದ್ದವು. ಎರಡು ಲಸಿಕೆಗಳು ನೀಡುವ ರಕ್ಷಣೆಗೆ ಹೋಲಿಸಿಕೊಂಡರೆ, ಬೂಸ್ಟರ್‌ ಲಸಿಕೆಯಿಂದ ಸಿಗುವ ರಕ್ಷಣೆ ಅಧಿಕ ಎಂದು ಸಂಸ್ಥೆಗಳು ಹೇಳಿಕೊಂಡಿದ್ದವು.

‘ತನ್ನ ಪ್ರಸರಣ ಶಕ್ತಿಯಿಂದ ಪ್ರಪಂಚದ ಅನೇಕ ಭಾಗಗಳಿಗೆ ಹರಡಿರುವ ಓಮೈಕ್ರಾನ್‌, ನಮ್ಮ ದೇಶದಲ್ಲೂ ಹಬ್ಬುತ್ತಿದ್ದು, ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿವೆ,‘ ಎಂದು ಆರೋಗ್ಯ ಇಲಾಖೆ ಹೇಳಿದೆ.

ಸದ್ಯ ಬೂಸ್ಟರ್‌ ಲಸಿಕೆ ಪಡೆದೂ ಓಮೈಕ್ರಾನ್‌ ಸೋಂಕಿಗೆ ಒಳಗಾಗಿರುವ ಇಬ್ಬರನ್ನೂ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ ಅವರನ್ನು 10 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT