ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಶನ್ ಟ್ರೊಜನ್ ಶೀಲ್ಡ್: ಅಪರಾಧ ಕೃತ್ಯಕ್ಕೆ ಸಂಚು ಹೂಡಿದ್ದ 800 ಮಂದಿ ಬಂಧನ

Last Updated 9 ಜೂನ್ 2021, 5:51 IST
ಅಕ್ಷರ ಗಾತ್ರ

ದಿ ಹೇಗ್: ಜಾಗತಿಕವಾಗಿ ವಿವಿಧ ರೀತಿಯ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದ 800ಕ್ಕೂ ಅಧಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು ಎರಡು ವರ್ಷಗಳಿಂದ ನಡೆದ ಕಾರ್ಯಾಚರಣೆ ಇದಾಗಿದ್ದು, 16 ರಾಷ್ಟ್ರಗಳಲ್ಲಿ ಅಪರಾಧಿಗಳು ಬಳಸುತ್ತಿದ್ದ ‘ಎನೊಮ್’ ಉಪಕರಣಗಳ ಆಧಾರದಲ್ಲಿ ಅವರ ಚಲನವಲನಗಳನ್ನು ಪತ್ತೆ ಮಾಡಿ, ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದರಲ್ಲಿ ವಿವಿಧ ಮಾಫಿಯಾ ಸಂಘಟನೆಗಳು, ಏಷ್ಯನ್ ಕ್ರೈಮ್ ಒಕ್ಕೂಟ, ಮೋಟಾರ್‌ಸೈಕಲ್ ಗ್ಯಾಂಗ್ ಮತ್ತು ಇತರ ವಿವಿಧ ಕ್ರಿಮಿನಲ್ ತಂಡಗಳು ಭಾಗಿಯಾಗಿವೆ. ಅವುಗಳ ಕಾರ್ಯಾಚರಣೆಯನ್ನು ಆಪರೇಶನ್ ಟ್ರೊಜನ್ ಶೀಲ್ಡ್ ಮೂಲಕ ಪರಿಶೀಲಿಸಲಾಗುತ್ತಿತ್ತು.

ಆಸ್ಟ್ರೇಲಿಯಾ ಮತ್ತು ಅಮೆರಿಕದ ಎಫ್‌ಬಿಐ ಜಂಟಿಯಾಗಿ ನಡೆಸಿದ ತನಿಖಾ ಕಾರ್ಯಾಚರಣೆಯಿಂದಾಗಿ ಜಾಗತಿಕವಾಗಿ ಸುಮಾರು150 ಕೊಲೆಗೆ ತಡೆ, ದೊಡ್ಡ ಮಟ್ಟದ ಮಾದಕವಸ್ತು ಕಳ್ಳಸಾಗಣೆ ಯತ್ನ ವಿಫಲ, 250 ಶಸ್ತ್ರಾಸ್ತ್ರ ಮತ್ತು 48 ಮಿಲಿಯನ್ ಡಾಲರ್ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಎನೊಮ್ ಉಪಕರಣಗಳನ್ನು ಸ್ವತಃ ಎಫ್‌ಬಿಐ 100ಕ್ಕೂ ಅಧಿಕ ರಾಷ್ಟ್ರಗಳ 300ಕ್ಕೂ ಅಧಿಕ ಕ್ರಿಮಿನಲ್‌ಗಳಿಗೆ ಒದಗಿಸಿದ್ದು, ಅವರ ಚಟುವಟಿಕೆಗಳನ್ನು ರಹಸ್ಯವಾಗಿ ಪರಿಶೀಲಿಸುತ್ತಿತ್ತು.

ಅಪರಾಧಿಗಳು ಸಂಕೇತ ಭಾಷೆ, ಫೋಟೊ, ಟೆಕ್ಸ್ಟ್ ಮೂಲಕ ಸಂವಹನ ನಡೆಸುತ್ತಿದ್ದರು. ಆದರೆ ಜಿಪಿಎಸ್, ಇಮೇಲ್, ಕರೆ ಸೌಲಭ್ಯ ಬಳಸುತ್ತಿರಲಿಲ್ಲ. ಅದಕ್ಕಾಗಿ ರಹಸ್ಯ ನೆಟ್‌ವರ್ಕ್ ಕೂಡ ಇತ್ತು ಎನ್ನುವುದನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT