ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜಲಪ್ರದೇಶ ಪ್ರವೇಶಿಸಲಿದ್ದ ಭಾರತದ ಜಲಾಂತರ್ಗಾಮಿಯನ್ನು ತಡೆದಿದ್ದೇವೆ: ಪಾಕ್‌

Last Updated 19 ಅಕ್ಟೋಬರ್ 2021, 16:14 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌:ಪಾಕಿಸ್ತಾನದ ಜಲಪ್ರದೇಶ ಪ್ರವೇಶಿಸಲಿದ್ದಭಾರತದ ಜಲಾಂತರ್ಗಾಮಿಯನ್ನು ನೌಕಾ ಪಡೆಯು ಕಳೆದ ವಾರ ತಡೆದಿದೆ ಎಂದು ಅಲ್ಲಿನ ಸೇನೆ ಮಂಗಳವಾರ ಹೇಳಿದೆ.

ಪಾಕಿಸ್ತಾನದ ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರತದ ನೌಕಾ ಪಡೆಯಿಂದ ಸದ್ಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ

‘ಅಕ್ಟೋಬರ್ 16 ರಂದು ಭಾರತೀಯ ಜಲಾಂತರ್ಗಾಮಿಯನ್ನು ನೌಕಾಪಡೆಯ ಗಸ್ತು ವಿಮಾನ ಪತ್ತೆ ಮಾಡಿತು. ನಂತರ ಅದನ್ನು ತಡೆಯಲಾಯಿತು,‘ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.

‘ಪಾಕಿಸ್ತಾನದ ನೌಕಾಪಡೆಯು ದೇಶದ ಜಲಪ್ರದೇಶವನ್ನು ರಕ್ಷಿಸಲು ಕಟ್ಟುನಿಟ್ಟಿನ ನಿಗಾ ವಹಿಸಿದೆ. ಗಸ್ತು ವಿಮಾನವು ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆಯನ್ನು ಹೀಗೆ ಪತ್ತೆ ಮಾಡುತ್ತಿರುವುದು ಇದು ಮೂರನೇ ಬಾರಿ ಎಂದು ಪಾಕ್‌ ತಿಳಿಸಿದೆ.

ಘಟನೆಯದ್ದು ಎಂದು ಹೇಳಲಾದಸಣ್ಣ ವಿಡಿಯೊ ತುಣುಕನ್ನೂ ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿದೆ.

ಈ ರೀತಿಯ ಘಟನೆಯು ಕೊನೆಯದಾಗಿ ಮಾರ್ಚ್ 2019ರಲ್ಲಿ ನಡೆದಿತ್ತು ಎಂದು ಪಾಕಿಸ್ತಾನ ಹೇಳಿದೆ.

‘ನೌಕಾಪಡೆಯು ತನ್ನ ವಿಶೇಷ ಕೌಶಲವನ್ನು ಬಳಸಿ ಭಾರತದ ಜಲಾಂತರ್ಗಾಮಿಯನ್ನು ನಿರ್ಬಂಧಿಸಿದೆ,‘ ಎಂದು ಪಾಕಿಸ್ತಾನ ನೌಕಾ ಪಡೆ 2019ರಲ್ಲಿ ಹೇಳಿಕೊಂಡಿತ್ತು.

2016ರಲ್ಲೂ ಇಂಥದ್ದೇ ಘಟನೆ ನಡೆದಿತ್ತು ಎಂದು ಪಾಕ್‌ ವಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT