ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಲಾಹೋರ್‌ಗೆ ‘ಅತ್ಯಂತ ಮಾಲಿನ್ಯ ನಗರಿ’ ಹಣೆಪಟ್ಟಿ

ಸ್ವಿಟ್ಜರ್‌ಲೆಂಡ್‌ನ ‘ಪ್ಲಾಟ್‌ಫಾರ್ಮ್‌ ಐಕ್ಯೂಏರ್‌’ ಕಂಪನಿ ಮಾಹಿತಿ
Last Updated 24 ನವೆಂಬರ್ 2021, 11:08 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲಾಗುವ ಲಾಹೋರ್‌ಗೆ, ಈಗ ಜಗತ್ತಿನಲ್ಲೇ ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ ಕಳಂಕ ಅಂಟಿದೆ.

ಸ್ವಿಟ್ಜರ್‌ಲೆಂಡ್‌ ಮೂಲದ ‘ಪ್ಲಾಟ್‌ಫಾರ್ಮ್‌ ಐಕ್ಯೂಏರ್‌’ ಎಂಬ ವಾಯು ಗುಣಮಟ್ಟದ ಮೇಲೆ ನಿಗಾ ಇಡುವ ಕಂಪನಿ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.

‘ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಲಾಹೋರ್‌ ಅಗ್ರ ಸ್ಥಾನ ಪಡೆದಿದೆ. ನಗರಗಳ ವಾಯು ಗುಣಮಟ್ಟ ಅಳೆಯುವ ಅಮೆರಿಕದ ಎಕ್ಯೂಐ ಎಂಬ ಅಳತೆಗೋಲಿನ ಪ್ರಕಾರ, ಬುಧವಾರ ಬೆಳಿಗ್ಗೆ 9.49ಕ್ಕೆ ಲಾಹೋರ್‌ನ ವಾಯು ಗುಣಮಟ್ಟ ಸೂಚ್ಯಂಕ 203 ದಾಖಲಾಗಿದೆ. ನಂತರದ ಸ್ಥಾನದಲ್ಲಿರುವ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 183’ ಎಂದು ಕಂಪನಿ ವಿವರಿಸಿದೆ.

‘ನಗರದಲ್ಲಿ ಹೊಗೆಮಂಜಿನ ಪ್ರಮಾಣ ಹೆಚ್ಚುತ್ತಿದೆ. ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳ ಪ್ರಮಾಣವೂ ಅಧಿಕಗೊಂಡಿದ್ದರಿಂದ ಸಾವಿರಾರು ಜನರು ಉಸಿರಾಟದ ತೊಂದರೆ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ. ಜನರು ಮನೆಯಲ್ಲಿಯೇ ಉಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ’ ಎಂದೂ ಕಂಪನಿ ಹೇಳಿದೆ.

ವಾಯು ಗುಣಮಟ್ಟ ಸೂಚ್ಯಂಕ 169 ಹೊಂದಿರುವ ಢಾಕಾ ಮೂರನೇ ಸ್ಥಾನದಲ್ಲಿದ್ದರೆ, ಸೂಚ್ಯಂಕ 168 ದಾಖಲಾಗಿರುವ ಕೋಲ್ಕತ್ತ ನಾಲ್ಕನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT