ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಆರ್ಥಿಕ ಬಿಕ್ಕಟ್ಟು: ರೂಪಾಯಿ ಮೌಲ್ಯ ತೀವ್ರ ಕುಸಿತ 

Last Updated 27 ಜನವರಿ 2023, 21:35 IST
ಅಕ್ಷರ ಗಾತ್ರ

ಕರಾಚಿ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲಿ ಶುಕ್ರವಾರ ರೂಪಾಯಿ ಮೌಲ್ಯ ಇನ್ನಷ್ಟು ಕುಸಿದಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 262.6ಕ್ಕೆ ಇಳಿಕೆ ಕಂಡಿದೆ.

ಪಾಕಿಸ್ತಾನದ ಸ್ಟೇಟ್‌ ಬ್ಯಾಂಕ್‌ ಪ್ರಕಾರ ದೇಶದ ಕರೆನ್ಸಿ ಮೌಲ್ಯ ಶುಕ್ರವಾರ 7.17 ರೂಪಾಯಿ ಅಥವಾ ಶೇ 2.73ರಷ್ಟು ಕುಸಿತ ದಾಖಲಿಸಿದೆ.

ಪಾಕಿಸ್ತಾನದ ರೂಪಾಯಿ ಮೌಲ್ಯವು ಇಂಟರ್‌ಬ್ಯಾಂಕ್‌ನಲ್ಲಿ ಗುರುವಾರದಿಂದ 34 ರೂಪಾಯಿಗಳಷ್ಟು ಅಪಮೌಲ್ಯಗೊಂಡಿದೆ. ಇದು, ಹೊಸ ವಿನಿಮಯ ದರ ವ್ಯವಸ್ಥೆ 1999ರಿಂದ ಶುರುವಾದಾಗಿನಿಂದ ಅತಿ ದೊಡ್ಡ ಅಪಮೌಲ್ಯ ಎನಿಸಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸಾಲ ಯೋಜನೆ ಪುನರ್‌ ನವೀಕರಣ ಸ್ಥಗಿತಗೊಳಿಸಿದ ಪಾಕಿಸ್ತಾನ ಸರ್ಕಾರವು ವಿನಿಮಯ ದರದ ಮಿತಿಯನ್ನು (ಕ್ಯಾಪ್‌) ಅನಧಿಕೃತವಾಗಿ ತೆಗೆದ ನಂತರ ರೂಪಾಯಿ ತೀವ್ರ ಅಪಮೌಲ್ಯಗೊಂಡಿದೆ.

ಕರೆನ್ಸಿ ವಿನಿಮಯ ಕಂಪನಿಗಳು ಮುಕ್ತ ಮಾರುಕಟ್ಟೆಯಲ್ಲಿ ದರ ಕ್ಯಾಪ್ ತೆಗೆದುಹಾಕುವಿಕೆ ಘೋಷಿಸಿದ ನಂತರ ಸರ್ಕಾರ ಈ ನಿರ್ಧಾರವನ್ನು ಗುರುವಾರ ತೆಗೆದುಕೊಂಡಿತ್ತು.

ಐಎಂಎಫ್‌ ಜತೆಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಆದಷ್ಟು ಶೀಘ್ರ ಈ ಸಮಸ್ಯೆ ಬಗೆಹರಿಯಲಿದೆ. ಐಎಂಎಫ್‌ ಮುಂದಿನ ತಿಂಗಳು ಅನುದಾನ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಪ್ರಧಾನಿ ಶಹಬಾಜ್‌ ಷರೀಫ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT