ಗುರುವಾರ , ಫೆಬ್ರವರಿ 9, 2023
30 °C

ವಿದ್ಯುತ್ ತಂತಿಗೆ ಸಿಲುಕಿದ ವಿಮಾನ; ಪವಾಡಸದೃಶ ರೀತಿಯಲ್ಲಿ ಪಾರಾದ ಸಿಬ್ಬಂದಿ

ಎಪಿ Updated:

ಅಕ್ಷರ ಗಾತ್ರ : | |

ಗೈಥರ್ಸ್‌ಬರ್ಗ್: ಲಘು ವಿಮಾನವೊಂದು ವಿದ್ಯುತ್‌ ತಂತಿಗಳಿಗೆ ಸಿಲುಕಿಕೊಂಡಿರುವ ಪ್ರಕರಣ ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿ ಭಾನುವಾರ ಸಂಜೆ ವರದಿಯಾಗಿದೆ. ವಿಮಾನದಲ್ಲಿದ್ದ ಇಬ್ಬರು ಅದೃಷ್ಠವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಮಾನವನ್ನು ಹೊರಗೆಳೆಯುವ ಪ್ರಯತ್ನ ಮುಂದುವರಿದಿದ್ದು, ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.

ನ್ಯೂಯಾರ್ಕ್‌ನ ವೈಟ್‌ಪ್ಲೇನ್ಸ್‌ನಿಂದ ಹೊರಟಿದ್ದ ಸಿಂಗಲ್‌ ಎಂಜಿನ್‌ ವಿಮಾನವು ಸಂಜೆ 5.40ರ ಸುಮಾರಿಗೆ ಗೈಥರ್ಸ್‌ಬರ್ಗ್‌ನ ಮಾಂಟ್‌ಗೊಮೆರಿ ಕೌಂಟಿ ಏರ್‌ಪಾರ್ಕ್ ಬಳಿ ವಿದ್ಯುತ್ ತಂತಿಗಳಿಗೆ ಸಿಲುಕಿದೆ. ವಿಮಾನದಲ್ಲಿ ಇಬ್ಬರು ಇದ್ದರು ಎಂದು ಫೆಡರಲ್‌ ವಿಮಾನಯಾನ ಆಡಳಿತ ಹೇಳಿಕೆ ಬಿಡುಗಡೆ ಮಾಡಿದೆ.

ಪತನಗೊಂಡ ವಿಮಾನವನ್ನು ಮೂನಿ ಎಂ20ಜೆ (Mooney M20J) ಎಂದು ಗುರುತಿಸಲಾಗಿದೆ.

ವಿಮಾನವು ನೆಲದಿಂದ ಸುಮಾರು 100 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದೆ. ವಿದ್ಯುತ್‌ ಪ್ರವಹಿಸುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು