ಸಿಒಪಿ26 ಶೃಂಗಸಭೆ: ಗ್ಲಾಸ್ಗೊದಲ್ಲಿ ಮೋದಿ, ಬ್ರಿಟನ್ ಪ್ರಧಾನಿ ಜತೆ ಮಾತುಕತೆ

ಲಂಡನ್/ಗ್ಲಾಸ್ಗೊ: ಸಿಒಪಿ26 ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗ್ಲಾಸ್ಗೊಗೆ ಆಗಮಿಸಲಿದ್ದಾರೆ.
ವಿಶ್ವಸಂಸ್ಥೆಯ ಸಮಾವೇಶದ ಸಂದರ್ಭದಲ್ಲಿ ಅವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಗ್ಲಾಸ್ಗೊದಲ್ಲಿ ಪ್ರಧಾನಿ ಮೋದಿ ಅವರು 120ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು ನಡೆಸುವ ಚರ್ಚೆಯಲ್ಲಿ ಭಾಗಿಯಾಗುವರು.
ಬ್ರಿಟನ್‌ನಲ್ಲಿ ಮೂರು ದಿನಗಳವರೆಗೆ ಅಂದರೆ ಮಂಗಳವಾರದವರೆಗೆ ಪ್ರವಾಸ ಕೈಗೊಳ್ಳುವ ಅವರು ಸಿಒಪಿ 26 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವರು. ಸೋಮವಾರ ಮಧ್ಯಾಹ್ನ ಅವರು ಭಾರತದ ಹವಾಮಾನ ಕ್ರಿಯಾ ಯೋಜನೆ ಕುರಿತು ಹೇಳಿಕೆ ನೀಡುವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.