ಮಂಗಳವಾರ, ಸೆಪ್ಟೆಂಬರ್ 29, 2020
22 °C
‘ಸೃಷ್ಟಿ ಆರೈಕೆ‘ಯ ವಿಶ್ವ ಪ್ರಾರ್ಥನಾ ದಿನದಂದು ಹೇಳಿಕೆ

‘ಪ್ಯಾರಿಸ್ ಒಪ್ಪಂದ‘ದಿಂದ ಅಮೆರಿಕ ಹಿಂದೆ ಸರಿದಿದ್ದು ಸರಿಯಲ್ಲ: ಪೋಪ್‌ ಫ್ರಾನ್ಸಿಸ್

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವ್ಯಾಟಿಕನ್ ಸಿಟಿ: ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ವಿವಿಧ ದೇಶಗಳು ಮಾಡಿಕೊಂಡಿರುವ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದು ತುಂಬಾ ಅಪಾಯದ ಕ್ರಮ ಎಂದು ಪೋಪ್‌ ಫ್ರಾನ್ಸಿಸ್‌ ಅಭಿಪ್ರಾಯಪಟ್ಟಿದ್ದಾರೆ.

ಚರ್ಚುಗಳಲ್ಲಿ ‘ಸೃಷ್ಟಿಯ ಕಾಳಜಿ(ಕೇರ್ ಫಾರ್ ಕ್ರಿಯೇಷನ್)ಗಾಗಿ ನಡೆಸುವ ವಿಶ್ವ ಪ್ರಾರ್ಥನಾ ದಿನದಂದು ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

‘ಹಸಿರು ಮನೆ ಅನಿಲವನ್ನು ಹೊರಸೂಸುವ ವಿಶ್ವದ 2ನೇ ರಾಷ್ಟ್ರ ಅಮೆರಿಕ, ಜಾಗತಿಕ ತಾಪಮಾನದ ವಿರುದ್ಧದ ಹೋರಾಟದ ಒಪ್ಪಂದದಿಂದ ಹಿಂದೆ ಸರಿದಿರುವುದು ಸರಿಯಾದ ಕ್ರಮವಲ್ಲ‘ ಎಂದು ಅವರು ಪ್ರತಿಪಾದಿಸಿದ್ದಾರೆ. ಇದೇ ವೇಳೆ, ‘2015ರ ಪ್ಯಾರಿಸ್ ಒಪ್ಪಂದದ ಪ್ರಕಾರವೇ ಜಾಗತಿಕ ತಾಪಮಾನದ ವಿರುದ್ಧ ಹೋರಾಟ ನಡೆಸಬೇಕು‘ ಎಂದು ಅವರು ಕರೆ ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಹವಾಮಾನ ವೈಪರೀತ್ಯದ ಚರ್ಚೆಗಳ ಹಿನ್ನೆಲೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ‘ಆಧುನಿಕ ಸಮಾಜ, ಎಗ್ಗಿಲ್ಲದೇ ಪರಿಸರವನ್ನು ಹಾಳು ಮಾಡಿದೆ. ಇದರಿಂದ ಉಂಟಾಗಿರುವ ಹವಾಮಾನ ವೈಪರೀತ್ಯವನ್ನು ತುರ್ತಾಗಿ ಸರಿಪಡಿಸಬೇಕಿದೆ‘ ಎಂದರು.

‘ನಮ್ಮ ಅತಿಯಾದ ಬೇಡಿಕೆಯನ್ನು ಪೂರೈಸುತ್ತಾ ನಿಸರ್ಗ ದಣಿದುಬಿಟ್ಟಿದೆ. ಅರಣ್ಯ ನಾಶವಾಗಿದೆ. ಮೇಲ್ಮಣ್ಣು ಸವೆದುಹೋಗಿದೆ. ಮರುಭೂಮಿ ಸೃಷ್ಟಿಯಾಗುತ್ತಿದೆ. ಸಮುದ್ರಗಳು ಆಮ್ಲೀಯವಾಗುತ್ತಿವೆ. ಬಿರುಗಾಳಿಯ ತೀವ್ರತೆ ಹೆಚ್ಚಾಗುತ್ತಿದೆ. ಒಟ್ಟಾರೆ ಸೃಷ್ಟಿ ನರಳುತ್ತಿದೆ‘ ಎಂದು ವಿವರಿಸಿದರು.

‘ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ಪ್ರತಿಪಾದಿಸಿದಂತೆ ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಷಿಯಸ್‌ಗೆ ಮಿತಗೊಳಿಸಲು ನಮ್ಮ ಸಾಮರ್ಥ್ಯ ಮೀರಿ ಪ್ರಯತ್ನಿಸಬೇಕು. ಅದಕ್ಕೂ ಮೀರಿದರೆ, ಮಹಾ ದುರಂತ ಎದುರಾಗುತ್ತದೆ.  ಈ ತಾಪಮಾನ ಹೆಚ್ಚಾದರೆ ಮಹಾವಿಪತ್ತು ಸಂಭವಿಸಲಿದೆ. ಇದರಿಂದ ವಿಶ್ವದಾದ್ಯಂತ ಬಡ ಸಮುದಾಯಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದಾದ್ಯಂತ ಸಂಭವಿಸುತ್ತಿರುವ ಹವಾಮಾನ ವೈಪರೀತ್ಯ, ಜೀವವೈವಿಧ್ಯದ ನಾಶ ಮತ್ತು ಕೊರೊನಾ ಸೋಂಕಿತ ದುರ್ಬಲ ವರ್ಗದವರನ್ನು ಅಸರ್ಪಮಕ ನಿರ್ವಹಿಸುತ್ತಿರುವುದು..ಇವೆಲ್ಲವೂ ಮನುಷ್ಯನ ಅತಿ ಆಸೆ ಮತ್ತು ಪರಿಸರವನ್ನು ಹೆಚ್ಚು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಎಚ್ಚರಿಕೆ ಎಂದು ಪೋಪ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು