ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳು ಬೈಡನ್‌ ವಿರುದ್ಧದ ಆರೋಪಗಳನ್ನು ಪ್ರಸಾರ ಮಾಡುತ್ತಿಲ್ಲ: ಟ್ರಂಪ್ ಆರೋಪ

ಮಾಧ್ಯಮಗಳ ವಿರುದ್ಧ ಡೊನಾಲ್ಡ್‌ ಟ್ರಂಪ್‌ ಗಂಭೀರ ಆರೋಪ
Last Updated 29 ಅಕ್ಟೋಬರ್ 2020, 8:12 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಅವರ ವಿರುದ್ಧ ಗಂಭೀರವಾದ ಭ್ರಷ್ಟಾಚಾರ ಆರೋಪಗಳಿದ್ದರೂ, ಆ ವಿಷಯವನ್ನು ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣಗಳು ಮರೆಮಾಚುತ್ತಿವೆ‘ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಅಮೆರಿಕದಲ್ಲಿ ಮಾಧ್ಯಮ ನಿಗ್ರಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ‘ ಎಂದು ಹೇಳಿದ್ದಾರೆ.

ಅರಿಜೋನಾದಲ್ಲಿ ಬುಧವಾರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಟ್ರಂಪ್‌, ‘ಮಾ್ಯಮಗಳು ಜೊ ಬೈೆಡೆನ್‌ ಮತ್ತು ಅವರ ಕುಟುಂಬದವರ ವಿರುದ್ಧದ ಯಾವುದೇ ಆರೋಪಗಳನ್ನು ಪ್ರಕಟಿಸುತ್ತಿಲ್ಲ. ಇದು ಪತ್ರಿಕಾ ಸ್ವಾತಂತ್ರ್ಯ ಅಲ್ಲ, ಇದು ಮಾಧ್ಯಮವನ್ನು ತಡೆಯುವ ಪ್ರಯತ್ನ’ ಎಂದು ಅವರು ಆಕ್ಷೇಪಿಸಿದ್ದಾರೆ.

‘ಒಬ್ವ ವ್ಯಕ್ತಿ ಅಕ್ರಮ ಅವ್ಯವಹಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಆದರೆ, ಆತನ ವಿರುದ್ಧ ಯಾವುದೇ ಮಾಧ್ಯಮ ಗಳು ಸುದ್ದಿಯನ್ನು ಪ್ರಕಟಿಸುವುದಿಲ್ಲ. ಇದು ಮಾಧ್ಯಮ ಸ್ವಾತಂತ್ರ್ಯವಲ್ಲ. ಮಾಧ್ಯಮಗಳನ್ನು ನಿಗ್ರಹಿಸುವ ಪ್ರಯತ್ನ‘ ಎಂದುಬೈಡೆನ್ ಅವರ ಪುತ್ರ ಹಂಟರ್ ಬೈಡೆನ್ ಹೆಸರಿಸದೇ, ಟ್ರಂಪ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT