ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣಭೇದ ನೀತಿ ಅನುಸರಿಸಿಲ್ಲ: ಮೇಘನ್‌–ಹ್ಯಾರಿ ಆರೋಪಕ್ಕೆ ರಾಜಮನೆತನದ ಪ್ರತಿಕ್ರಿಯೆ

Last Updated 11 ಮಾರ್ಚ್ 2021, 14:29 IST
ಅಕ್ಷರ ಗಾತ್ರ

ಲಂಡನ್‌: ‘ಬ್ರಿಟಿಷ್‌ ರಾಜಮನೆತನ ಎಂದಿಗೂ ವರ್ಣಭೇದ ನೀತಿ ಅನುಸರಿಸಿಲ್ಲ’ ಎಂದು ರಾಜಕುಮಾರ ವಿಲಿಯಮ್ ಗುರುವಾರ ಹೇಳುವ ಮೂಲಕ ರಾಜಮನೆತನವನ್ನು ಸಮರ್ಥಿಸಿಕೊಂಡಿದ್ದಾರೆ.

ಸಹೋದರ ರಾಜಕುಮಾರ ಹ್ಯಾರಿ ಹಾಗೂ ನಾದಿನಿ ಮೇಘನ್‌ ಅವರು ರಾಜಮನೆತನದ ವಿರುದ್ಧ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಪೂರ್ವ ಲಂಡನ್‌ನಲ್ಲಿರುವ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ, ರಾಜಕುಮಾರ ಹ್ಯಾರಿ–ಮೇಘನ್‌ ಅವರು ಓಪ್ರಾ ವಿನ್‌ಫ್ರೆ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾಡಿರುವ ಆರೋಪಗಳ ಕುರಿತು ಮೊದಲ ಬಾರಿಗೆ ವಿಲಿಯಮ್‌ ಪ್ರತಿಕ್ರಿಯಿಸಿದರು.

ತನ್ನ ವಿರುದ್ಧದ ಆರೋಪಗಳಿಗೆ ಬಕಿಂಗ್‌ಹ್ಯಾಮ್‌ ಅರಮನೆ ಪ್ರತಿಕ್ರಿಯೆ ನೀಡಿದ್ದರೂ, ಅದು ಈ ಸಂದರ್ಶನ ಎಬ್ಬಿಸಿರುವ ವಿವಾದವನ್ನು ಶಮನ ಮಾಡುವಲ್ಲಿ ವಿಫಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT