ಬುಧವಾರ, ಮೇ 25, 2022
26 °C

ಉಕ್ರೇನ್‌ ಗಡಿಗೆ ರಕ್ತ, ವೈದ್ಯಕೀಯ ಪರಿಕರಗಳನ್ನು ಪೂರೈಸುತ್ತಿರುವ ರಷ್ಯಾ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ಸನ್ನದ್ಧವಾಗಿ ನಿಂತಿರುವ ರಷ್ಯಾ ಸಿದ್ಧತೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ. ಸಂಭಾವ್ಯ ಯುದ್ಧದಲ್ಲಿ ಗಾಯಗೊಂಡವರಿಗೆ ನೀಡಲೆಂದು ರಕ್ತ ಮತ್ತು ವೈದ್ಯಕೀಯ ಪರಿಕರಗಳನ್ನು ಗಡಿಗೆ ತಲುಪಿಸುತ್ತಿದೆ ಎಂದು ಅಮೆರಿಕದ ಮೂವರು ಉನ್ನತ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ನಡೆಸಲಿದೆಯೇ ಎಂಬುದನ್ನು ನಿರ್ಧರಿಸಲು ರಕ್ತ ಪೂರೈಕೆಯಂಥ ಸಂಗತಿಗಳು ನಿರ್ಣಾಯಕ ಎನಿಸಿಕೊಳ್ಳುತ್ತವೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಗಳಿವೆ ಎಂದು ಈ ಮೊದಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕೂಡ ಹೇಳಿದ್ದರು.

ರಷ್ಯಾದ ಯುದ್ಧ ಸನ್ನದ್ಧತೆಯಲ್ಲಿ ‘ವೈದ್ಯಕೀಯ ಪರಿಕರಗಳ’ ನಿಯೋಜನೆಯೂ ಇದೆ ಎಂದು ಅಮೆರಿಕ ಈ ಹಿಂದೆ ಹೇಳಿಕೊಂಡಿತ್ತು.

‘ಈ ಬೆಳವಣಿಗೆಗಳು ಮತ್ತೊಂದು ದಾಳಿ ನಡೆಯಲಿದೆ ಎಂಬುದರ ಖಾತರಿಯಲ್ಲ. ಪರಿಸ್ಥಿತಿ ಹತೋಟಿಯಲ್ಲಿ ಇಲ್ಲದೇ ಹೋದರೆ, ದಾಳಿಯನ್ನು ಕಾರ್ಯಗತಗೊಳಿಸುವುದಿಲ್ಲ’ ಎಂದು ಅಮೆರಿಕದ ನಿವೃತ್ತ ಲೆಫ್ಟಿನೆಂಟ್ ಜನರಲ್ ಬೆನ್ ಹಾಡ್ಜಸ್ ಹೇಳಿದ್ದಾರೆ.

ಉಕ್ರೇನ್‌ ಗಡಿಯಲ್ಲಿ ಅಮೆರಿಕ ಸೇನಾ ಪಡೆಗಳ 1,00,000 ಹೆಚ್ಚು ತುಕಡಿಗಳನ್ನು ನಿಯೋಜಿಸಿದ್ದು, ಎರಡೂ ದೇಶಗಳ ನಡುವೆ ಯುದ್ಧ ಕಾರ್ಮೋಡ ಕವಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು