ಮಂಗಳವಾರ, ಜುಲೈ 5, 2022
25 °C

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ 1,351 ಸೈನಿಕರ ಸಾವು: ರಷ್ಯಾದ ಅಧಿಕೃತ ಮಾಹಿತಿ

ಎಪಿ Updated:

ಅಕ್ಷರ ಗಾತ್ರ : | |

ಮಾಸ್ಕೊ: ಉಕ್ರೇನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಕಡೆಯ 1,351 ಸೈನಿಕರು ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಸೇನಾ ಪಡೆಗಳ ಉಪ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ.

ಈ ಕಾರ್ಯಾಚರಣೆಯಲ್ಲಿ 3,825 ಯೋಧರು ಗಾಯಗೊಂಡಿದ್ದಾರೆ ಎಂದು ಜನರಲ್ ಸೆರ್ಗೆಯ್ ರುಡ್‌ಸ್ಕೊಯ್‌ ತಿಳಿಸಿದರು. 

ಉಕ್ರೇನ್‌ನಲ್ಲಿ ನಡೆದಿರುವ ನಾಲ್ಕು ವಾರಗಳ ಯುದ್ಧದಲ್ಲಿ 7,000 ರಿಂದ 15,000 ರಷ್ಯಾದ ಸೈನಿಕರು ಮೃತಪಟ್ಟಿದ್ದಾರೆ ಎಂದು ನ್ಯಾಟೊ ಬುಧವಾರ ಅಂದಾಜಿಸಿತ್ತು.

ಪೂರ್ವ ಉಕ್ರೇನ್‌ನಲ್ಲಿ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಮತ್ತು ರಾಷ್ಟ್ರೀಯ ಗಾರ್ಡ್‌ನಂಥ ಪಡೆಗಳಲ್ಲಿ ಆಗಿರುವ ಸಾವು ನೋವುಗಳು ಈ ಅಂಕಿ ಅಂಶಗಳಲ್ಲಿ ಸೇರಿಲ್ಲ ಎಂದು ಹೇಳಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು