ಶುಕ್ರವಾರ, ಜುಲೈ 1, 2022
28 °C

ಪ್ರತ್ಯೇಕತಾವಾದಿಗಳಿಗೆ ರಷ್ಯಾ ಪೌರತ್ವ: ಪುಟಿನ್‌ ಆದೇಶ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌ (ಎಪಿ): ರಷ್ಯಾ ಸೇನೆಯ ಬಲವರ್ಧನೆಗೆ ನೇಮಕಾತಿಯಲ್ಲಿ ವಯೋಮಾನ ಸಡಿಲಿಕೆಯ ಮಸೂದೆಯನ್ನು ಸಂಸತ್ತು  ಅಂಗೀಕರಿಸಿದ ಬೆನ್ನಲ್ಲೇ ಅಧ್ಯಕ್ಷ ಪುಟಿನ್‌, ಉಕ್ರೇನ್‌ನ ದಕ್ಷಿಣದ ಕೆಲವು ಪ್ರದೇಶಗಳಲ್ಲಿ ತಮ್ಮ ಪರವಿರುವ ಪ್ರತ್ಯೇಕತಾವಾದಿಗಳಿಗೆ ರಷ್ಯಾ ಪೌರತ್ವವನ್ನು ತ್ವರಿತವಾಗಿ ನೀಡಲು ಆದೇಶಿಸಿದ್ದಾರೆ.

ಪುಟಿನ್ ಅವರು ಬುಧವಾರ ಹೊರಡಿಸಿರುವ ಈ ಆದೇಶವು ಉಕ್ರೇನಿನ ಕೆರ್ಸಾನ್‌ ಮತ್ತು ಝಪೊರಿಝಿಯಾ ಪ್ರದೇಶಗಳಿಗೆ ಅನ್ವಯಿಸಲಿದೆ. ರಷ್ಯಾ ಆಕ್ರಮಿತ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಪುಟಿನ್‌ ಈ ಆದೇಶ ಹೊರಡಿಸಿದ್ದಾರೆ. 

ನೆರೆಯ ದೇಶದ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಮೂರು ತಿಂಗಳ ನಂತರ, ಪುಟಿನ್ ಅವರು ಮಾಸ್ಕೊ ಸೇನಾ ಆಸ್ಪತ್ರೆಗೆ ಮೊದಲ ಬಾರಿಗೆ ಭೇಟಿ ನೀಡಿದರು. ಉಕ್ರೇನ್‌ನಲ್ಲಿ ಗಾಯಗೊಂಡ ಸೈನಿಕರನ್ನು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು ಎಂದು ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು