ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ 11,000 ಕ್ಕೂ ಅಧಿಕ ಸೈನಿಕರ ಹತ್ಯೆ: ಉಕ್ರೇನ್ ಮಾಹಿತಿ

Last Updated 6 ಮಾರ್ಚ್ 2022, 10:09 IST
ಅಕ್ಷರ ಗಾತ್ರ

ಕೀವ್‌: ಫೆಬ್ರುವರಿ 25ರಿಂದ ಇಲ್ಲಿಯವರೆಗೂ 11,000 ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್‌ ಸರ್ಕಾರ ಹೇಳಿಕೊಂಡಿದೆ. ಈ ಕುರಿತು ಸುದ್ದಿಸಂಸ್ಥೆ ‘ರಾಯಿಟರ್ಸ್‌’ ವರದಿ ಮಾಡಿದೆ.

ಅಮೆರಿಕ ಹಾಗೂ ನ್ಯಾಟೊ ಮಿತ್ರರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ರಷ್ಯಾ ಫೆ. 25ರಂದು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಈ ಕಾರ್ಯಚರಣೆಯಲ್ಲಿ ಉಕ್ರೇನ್‌ನ ಸೈನಿಕರು, ನಾಗರಿಕರು ಮತ್ತು ಮಕ್ಕಳು ಹತರಾಗಿದ್ದಾರೆ.

ಇದೇ ವೇಳೆ ಯುದ್ಧಪೀಡಿತ ಉಕ್ರೇನ್‌ನಲ್ಲಿ ಜನನಿಬಿಡ ಪ್ರದೇಶವನ್ನು ರಷ್ಯಾ ಗುರಿಯಾಗಿಸುತ್ತಿದೆ. ಆದರೆ, ಉಕ್ರೇನ್ ಪ್ರತಿರೋಧದ ಶಕ್ತಿಯು ರಷ್ಯಾವನ್ನು ಅಚ್ಚರಿಗೊಳಿಸಿದ್ದು, ಮುನ್ನಡೆಯನ್ನು ನಿಧಾನಗೊಳಿಸುತ್ತಿದೆ ಎಂದು ಬ್ರಿಟನ್ ಮಿಲಿಟರಿ ಗುಪ್ತಚರ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT