ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಜಿಗಳ ದಾಳಿಯ ನಂತರದ ಮೊದಲ ಭಯಾನಕ ದಾಳಿ ಇದಾಗಿದೆ: ಉಕ್ರೇನ್‌

Last Updated 25 ಫೆಬ್ರುವರಿ 2022, 6:26 IST
ಅಕ್ಷರ ಗಾತ್ರ

ಕೀವ್‌: ರಷ್ಯಾದ ದಾಳಿಯು ನಾಜಿಗಳ ಭಯಾನಕ ದಾಳಿಯ ರೀತಿಯಲ್ಲಿಯೇ ನಡೆಯುತ್ತಿದೆ ಎಂದು ಉಕ್ರೇನ್‌ ಹೇಳಿದೆ.

ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ, ‘ಕೀವ್‌ ಮೇಲೆ ರಷ್ಯಾವು ರಾಕೆಟ್ ದಾಳಿ ನಡೆಸುತ್ತಿದೆ. ಕಳೆದ ಬಾರಿ 1941 ರಲ್ಲಿ ನಾಜಿ ಜರ್ಮನಿಯಿಂದ ದಾಳಿಗೊಳಗಾದಾಗ ನಮ್ಮ ರಾಜಧಾನಿ ಈ ರೀತಿಯ ಭಯಾನಕತೆಯನ್ನು ಅನುಭವಿಸಿತ್ತು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ನಾಜಿ ದುಷ್ಟರನ್ನು ಉಕ್ರೇನ್‌ ಸೋಲಿಸಿತ್ತು. ಈಗ ರಷ್ಯಾವನ್ನೂ ನಾವು ಸೋಲಿಸುತ್ತೇವೆ. ಪುಟಿನ್ ಇದನ್ನು ನಿಲ್ಲಿಸಬೇಕು. ವಿಶ್ವದಿಂದ ರಷ್ಯಾವನ್ನು ಪ್ರತ್ಯೇಕಗೊಳಿಸಬೇಕಿದೆ. ಅದರೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಳ್ಳಬೇಕಿದೆ. ಅವರನ್ನು ಹೊರಹಾಕಬೇಕಿದೆ’ ಎಂದೂ ಕುಲೆಬಾ ಟ್ವೀಟಿಸಿದ್ದಾರೆ.

ರಷ್ಯಾ ತನ್ನ ದೇಶದ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 137 ನಾಗರಿಕರು ಮತ್ತು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳದಾರೆ.

ಉಕ್ರೇನ್‌ನ 74 ಸೇನಾ ನೆಲೆಗಳನ್ನು ನಾಶ ಮಾಡಲಾಗಿದೆ. ಅದರಲ್ಲಿ 11 ವಾಯುನೆಲೆಗಳೂ ಸೇರಿವೆ ಎಂದು ರಷ್ಯಾ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT