ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಶ್ಚಿಮಾತ್ಯರ ತೈಲ ದರ ಮಿತಿ ಅಸ್ತ್ರಕ್ಕೆ ‍ಪುಟಿನ್‌ ಪೂರೈಕೆ ಮಿತಿ ಪ್ರತ್ಯಸ್ತ್ರ 

ಉಕ್ರೇನ್‌ ಮೇಲೆ ಒತ್ತಡ ಹೆಚ್ಚಿಸಲು ರಷ್ಯಾ ಯತ್ನ ‌
Last Updated 5 ಡಿಸೆಂಬರ್ 2022, 14:23 IST
ಅಕ್ಷರ ಗಾತ್ರ

ಕೀವ್‌: ರಷ್ಯಾದ ಪ್ರತಿ ಬ್ಯಾರೆಲ್‌ ತೈಲಕ್ಕೆ 60 ಡಾಲರ್‌ ಬೆಲೆ ಮಿತಿಗೊಳಿಸಿದ ಜತೆಗೆ ರಷ್ಯಾದ ತೈಲ ಆಮದಿಗೆ ಕೆಲವು ರೀತಿಯ ನಿಷೇಧಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಸೋಮವಾರದಿಂದ ಹೇರಿವೆ.

ಕಳೆದ ಒಂಬತ್ತು ತಿಂಗಳಿನಿಂದ ಉಕ್ರೇನ್‌ನಲ್ಲಿ ಆಕ್ರಮಣ ನಡೆಸುತ್ತಿರುವ ರಷ್ಯಾ ಮೇಲೆ ಒತ್ತಡ ಹೆಚ್ಚಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು, ಬೆಲೆ ಮಿತಿ ಅಸ್ತ್ರ ಪ್ರಯೋಗಿಸಿವೆ. ಆಸ್ಟ್ರೇಲಿಯಾ, ಬ್ರಿಟನ್‌, ಕೆನಡಾ, ಜಪಾನ್‌ ಜತೆಗೆಯುರೋಪ್‌ ಒಕ್ಕೂಟ ಹಾಗೂ ಅಮೆರಿಕ ತೈಲ ದರ ಮಿತಿ ಹೇರಲುಶುಕ್ರವಾರವೇ ಒಪ್ಪಿಕೊಂಡಿದ್ದವು.

ಅಲ್ಲದೇ ಯುರೋಪಿನ 27 ದೇಶಗಳು ತಮ್ಮ ವ್ಯಾಪ್ತಿಯ ಸುಮುದ್ರದಲ್ಲಿ ರಷ್ಯಾದ ಎಂಬಾರ್ಗೊ ತೈಲ ಸಾಗಣೆ ಹಡಗುಗಳ ಸಂಚಾರದ ಮೇಲೂ ನಿರ್ಬಂಧ ಹೇರಿವೆ. ಪಾಶ್ಚಿಮಾತ್ಯ ರಾಷ್ಟ್ರಗಳ ಈ ನಿರ್ಬಂಧಗಳು ಮಾರುಕಟ್ಟೆಯ ಬೆಲೆಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂಬ ಪ್ರಶ್ನೆಗಳನ್ನು ಮೂಡಿಸಿವೆ.

ಸೋಮವಾರ ಅಮೆರಿಕದಕಚ್ಚಾ ತೈಲ ಬೆಲೆ 90 ಸೆಂಟ್ಸ್‌ವ‌ರೆಗೆ ಏರಿಕೆಯಾಗಿ, 80.88 ಡಾಲರ್‌ಗೆ ತಲುಪಿತು. ಉಕ್ರೇನ್‌ ಯುದ್ಧ ತೀವ್ರತೆಯಲ್ಲಿದ್ದಾಗ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು.

ಪಾಶ್ಚಿಮಾತ್ಯ ರಾಷ್ಟ್ರಗಳ ಈ ನಡೆಗೆ ರಷ್ಯಾ ಸೊಪ್ಪು ಹಾಕಿಲ್ಲ. ಉಕ್ರೇನ್‌ ಅಧ್ಯಕ್ಷ ವ್ಲೊಡಿಮಿರ್‌ ಝೆಲೆನ್‌ಸ್ಕಿ ಕೂಡ ಟೀಕಿಸಿದ್ದಾರೆ. ಅಲ್ಲದೆ ತಮ್ಮ ಸರ್ಕಾರವು ದರ ಮಿತಿ ಅರ್ಧದಷ್ಟು ಹೆಚ್ಚಾಗಬೇಕೆಂದು ಬಯಸುತ್ತದೆ ಎಂದಿದ್ದಾರೆ.

ಇಂಧನ ವ್ಯವಸ್ಥೆ ಉಸ್ತುವಾರಿ, ರಷ್ಯಾದ ಉಪ ಪ್ರಧಾನಿ ಅಲೆಂಕ್ಸಾಂಡರ್‌ ನೊವಾಕ್‌ ಅವರು ‘ದರ ಮಿತಿ ಬಳಸಿಕೊಳ್ಳಲು ಯತ್ನಿಸುವ ರಾಷ್ಟ್ರಗಳಿಗೆ ರಷ್ಯಾ ತನ್ನ ತೈಲವನ್ನು ಮಾರಾಟ ಮಾಡುವುದಿಲ್ಲ’ ಎಂದು ಭಾನುವಾರ ಟಿ.ವಿ ಭಾಷಣದಲ್ಲಿ ಎಚ್ಚರಿಕೆ ನೀಡಿದರು.

‘ನಾವು ತೈಲ ಉತ್ಪಾದನೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬೇಕಾಗಿದ್ದರೂ ಮಾರುಕಟ್ಟೆ ನಿಯಮಗಳಿಗೆ ಅನುಸಾರ ನಮ್ಮೊಂದಿಗೆ ವ್ಯವಹರಿಸುವ ದೇಶಗಳಿಗೆ ಮಾತ್ರ ನಾವು ತೈಲ ಮತ್ತು ತೈಲ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ’ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ತೈಲ ಬೆಲೆ ಮಿತಿ ಜಾರಿಗೆ ತರುವ ಕೆಲ ತಾಸುಗಳ ಮೊದಲು ನೊವಾಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT