ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ನಾಗರಿಕನನ್ನು ಕೊಂದ ರಷ್ಯಾ ಯೋಧನಿಗೆ ಜೀವಾವಧಿ ಶಿಕ್ಷೆ

Last Updated 23 ಮೇ 2022, 13:07 IST
ಅಕ್ಷರ ಗಾತ್ರ

ಕೀವ್: ಉಕ್ರೇನ್ ನಾಗರಿಕನನ್ನು ಕೊಂದ ಅಪರಾಧಕ್ಕಾಗಿ ಅಲ್ಲಿನ ನ್ಯಾಯಾಲಯವು ರಷ್ಯಾದ ಯೋಧನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿ 3 ತಿಂಗಳ ಬಳಿಕ ಮೊದಲ ಬಾರಿಗೆ ರಷ್ಯಾದ ಒಬ್ಬ ಯೋಧನಿಗೆ ಯುದ್ದಾಪರಾಧಕ್ಕೆ ಶಿಕ್ಷೆಯಾಗಿದೆ.

ಯುದ್ಧದ ಆರಂಭಿಕ ದಿನಗಳಲ್ಲಿ ರಷ್ಯಾ ಯೋಧ ವದೀಮ್ ಶಿಶಿಮರೀನ್, ಉಕ್ರೇನ್‌ನ ಸುಮಿ ಪ್ರಾಂತ್ಯದ ಹಳ್ಳಿಗನ ತಲೆಗೆ ಗುಂಡಿಕ್ಕಿದ ಆರೋಪ ಸಾಬೀತಾಗಿದೆ.

ಸೆಲ್‌ಫೋನ್‌ನಲ್ಲಿ ಮಾತನಾಡುತ್ತಿದ್ದ ಉಕ್ರೇನ್ ವ್ಯಕ್ತಿ ಅವರ ಸೇನಾಪಡೆಗಳಿಗೆ ತಮ್ಮ ಸ್ಥಳದ ಮಾಹಿತಿ ನೀಡುತ್ತಿರಬಹುದು ಎಂದು ಭಾವಿಸಿದ್ದ ರಷ್ಯಾ ಸೇನಾಪಡೆಯ ಅಧಿಕಾರಿಯೊಬ್ಬರು ಅವರಿಗೆ ಗುಂಡಿಕ್ಕಲು ಆದೇಶಿಸಿದ್ದರು ಎಂದು ಶಿಕ್ಷೆಗೊಳಗಾದ ಯೋಧ ನ್ಯಾಯಾಲಯದಲ್ಲಿ ಹೇಳಿದ್ದಾನೆ.

ವಿಶ್ವಸಂಸ್ಥೆ ಪ್ರಕಾರ, ಉಕ್ರೇನ್‌ನ 10 ಕೋಟಿಗೂ ಹೆಚ್ಚು ಜನ ಮನೆ ಮಠ ಬಿಟ್ಟು ಬೇರೆ ಬೇರೆ ಪ್ರದೇಶಗಳಿಗೆ ತೆರಳಿದ್ದಾರೆ.

ಈ ನಡುವೆ, ಸ್ವಿಡ್ಜರ್ಲೆಂಡ್‌ನ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯಾ ವಿರುದ್ಧ ‘ಗರಿಷ್ಠ’ನಿರ್ಬಂಧಗಳಿಗೆ ಕರೆ ನೀಡಿದ್ದಾರೆ.

ತೈಲ ನಿರ್ಬಂಧ ಸೇರಿದಂತೆ ರಷ್ಯಾದ ಆಕ್ರಮಣವನ್ನು ತಡೆಯಲು ಮತ್ತಷ್ಟು ನಿರ್ಬಂಧಗಳನ್ನು ಹೇರಬೇಕಿದೆ ಎಂದು ಅವರು ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT