ಮಂಗಳವಾರ, ಅಕ್ಟೋಬರ್ 26, 2021
23 °C

ರಷ್ಯಾದಲ್ಲಿ ಕೋವಿಡ್‌ ಏಕಾಏಕಿ ಉಲ್ಬಣ: ಗುರುವಾರ ದಾಖಲೆಯ ಪ್ರಕರಣಗಳು ವರದಿ

ಎಪಿ Updated:

ಅಕ್ಷರ ಗಾತ್ರ : | |

ಮಾಸ್ಕೊ: ರಷ್ಯಾದಲ್ಲಿ ಕೊರೊನಾವೈರಸ್ ಸೋಂಕು ಏಕಾಏಕಿ ಉಲ್ಬಣಗೊಂಡಿದೆ. ಗುರುವಾರ ಈ ವರ್ಷದಲ್ಲೇ ಅತ್ಯಧಿಕ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಸೋಂಕು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. 

ನಿಧಾನಗತಿಯ ಲಸಿಕೀಕರಣವು ಸೋಂಕು ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. 

ಕಳೆದ ಎರಡು ದಿನಗಳಿಂದ ರಷ್ಯಾದಲ್ಲಿ 900ಕ್ಕೂ ಅಧಿಕ ಸಾವುಗಳು ವರದಿಯಾಗುತ್ತಿವೆ. ಗುರುವಾರ 924 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ಧಾರೆ. ಬುಧವಾರ 929 ಮಂದಿ ಸಾವಿಗೀಡಾಗಿದ್ದರು. ರಷ್ಯಾದಲ್ಲಿ ಈಗಾಗಲೇ ಕೋವಿಡ್‌ಗೆ 213,000 ಮಂದಿ ಬಲಿಯಾಗಿದ್ದಾರೆ. ಆದರೆ, ಸಾವಿನ ವಾಸ್ತವ ಸಂಖ್ಯೆ ಅಧಿಕೃತ ಮಾಹಿತಿಗಿಂತಲೂ ಅಧಿಕವಾಗಿರಬಹುದು ಎಂದು ಹೇಳಲಾಗಿದೆ.  

ಗುರುವಾರ ರಷ್ಯಾದಲ್ಲಿ 27,550 ಸೋಂಕು ಪ್ರಕರಣಗಳು ವರದಿಯಾದವು. ಆದರೆ, ಈ ಪ್ರಕರಣಗಳು ಹಿಂದಿನ ದಿನಕ್ಕಿಂತಲೂ ಶೇ 10ರಷ್ಟು ಅಧಿಕ ಎಂಬ ಅಂಶ ದೇಶವನ್ನು ಅಘಾತಕ್ಕೀಡು ಮಾಡಿದೆ. ಮಾಸ್ಕೋನಲ್ಲಿ ಗುರುವಾರ ಶೇ 50 ರಷ್ಟು ಏರಿಕೆಯಾಗಿದ್ದು, ಏಕಾಏಕಿ 5,404 ಪ್ರಕರಣಗಳು ಪತ್ತೆಯಾಗಿವೆ. 

ಸೆಪ್ಟೆಂಬರ್‌ ಅಂತ್ಯದನಂತರ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ ಕಂಡು ಬಂದಿದೆ. ಇದಕ್ಕಾಗಿ ನಿಧಾನಗತಿಯ ಲಸಿಕೀಕರಣವನ್ನು ಟೀಕಿಸಲಾಗುತ್ತಿದೆ.

ರಷ್ಯಾದ 14.6 ಕೋಟಿ ಜನರ ಪೈಕಿ ಶೇ 33ರಷ್ಟು ಜನರು ಕೊರೊನಾವೈರಸ್ ಲಸಿಕೆಯ ಕನಿಷ್ಠ ಒಂದು ಡೋಸ್‌ ಪಡೆದಿದ್ದಾರೆ. ಶೇ 29ರಷ್ಟು ಮಂದಿ  ಸಂಪೂರ್ಣ ಲಸಿಕೆ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು