ಸ್ಪೂಟ್ನಿಕ್-ವಿ 91.6% ಪರಿಣಾಮಕಾರಿ: ಕೋವಿಡ್‌ಗೆ ಹೊಸ ಅಸ್ತ್ರ ಎಂದ ವಿಜ್ಞಾನಿಗಳು

ಮಾಸ್ಕೊ: ರಷ್ಯಾದ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆಯು ಶೇಕಡಾ 91.6 ಪರಿಣಾಮಕಾರಿಯಾಗಿದೆ ಎಂದು 'ದಿ ಲ್ಯಾನ್ಸೆಟ್ ಇಂಟರ್ ನ್ಯಾಷನಲ್ ಮೆಡಿಕಲ್' ನಿಯತಕಾಲಿಕೆಯಲ್ಲಿ ಹೇಳಲಾಗಿದೆ. ಲಸಿಕೆಯ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗದ ವಿಮರ್ಶೆ ಉಲ್ಲೇಖಿಸಿ ಈ ವರದಿ ಮಾಡಲಾಗಿದೆ.
ಕೋವಿಡ್ ವಿರುದ್ಧ ಹೋರಾಡಲು ಜಗತ್ತಿಗೆ ಮತ್ತೊಂದು ಆಯುಧ ಸಿಕ್ಕಿದೆ ಎಂದು ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ವಿಶ್ಲೇಷಿಸಿ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಲಸಿಕೆಯ ಕೊನೆಯ ಹಂತದ ಪ್ರಯೋಗಕ್ಕೂ ಮೊದಲೇ ಅದನ್ನು ಬಳಕೆಗೆ ನೀಡುವ ರಷ್ಯಾದ ನಿರ್ಧಾರವನ್ನು ವಿಜ್ಞಾನಿಗಳು ತಕ್ಕಮಟ್ಟಿಗೆ ಸರ್ಮಥಿಸಿಕೊಂಡಿದ್ದಾರೆ.
ಸ್ಪೂಟ್ನಿಕ್-ವಿ ಲಸಿಕೆಯ ಟ್ರಯಲ್‌ಗಳಲ್ಲಿ ಪಾರದರ್ಶಕತೆ ಇಲ್ಲ, ಆತುರದಿಂದ ಬಿಡುಗಡೆ ಮಾಡಲಾಗಿದೆ ಎಂದೆಲ್ಲ ಟೀಕೆ ಮಾಡಲಾಗಿತ್ತು. ಆದರೆ, ಅದರ ಫಲಿತಾಂಗಳು ಸ್ಪಷ್ಟವಾಗಿವೆ. ಲಸಿಕೆಯ ವೈದ್ಯಕೀಯ ತತ್ವ ಅನಾವರಣಗೊಂಡಿದೆ. ಕೋವಿಡ್ ಅನ್ನು ನಿಗ್ರಹಿಸಲು ಜಗತ್ತಿಗೆ ಮತ್ತೊಂದು ಅಸ್ತ್ರ ಸಿಕ್ಕಿದೆ ಎಂದು ಲಂಡನ್‌ನ 'ಇಯನ್ ಜಾನ್ಸ್ ವಿಶ್ವವಿದ್ಯಾಲಯ'ದ 'ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್' ವಿಭಾಗದ ಪ್ರೊಫೆಸರ್ ಪೊಲ್ಲಿ ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.