ಭಾನುವಾರ, ಮೇ 22, 2022
24 °C

ಮರಿಯುಪೋಲ್‌ನಲ್ಲಿರುವ ಯೋಧರನ್ನು ನಾಶ ಮಾಡುತ್ತೇವೆ: ಉಕ್ರೇನ್‌ಗೆ ರಷ್ಯಾ ಎಚ್ಚರಿಕೆ

ಎಪಿ Updated:

ಅಕ್ಷರ ಗಾತ್ರ : | |

ಮಾಸ್ಕೊ: ಉಕ್ರೇನ್‌ನ ಬಂದರು ನಗರ ಮರಿಯುಪೋಲ್‌ನಲ್ಲಿ ಹೋರಾಡುತ್ತಿರುವ ಯೋಧರು ಶರಣಾಗದಿದ್ದರೆ ಎಲ್ಲರನ್ನೂ ನಾಶಮಾಡಲಾಗುವುದು ಎಂದು ರಷ್ಯಾ ಎಚ್ಚರಿಕೆ ನೀಡಿದೆ.

ಉಕ್ರೇನ್ ಯೋಧರು ಶರಣಾಗಲು ಗಡುವು ವಿಧಿಸಿರುವ ರಷ್ಯಾ ರಕ್ಷಣಾ ಸಚಿವಾಲಯ, ಆಯುಧ ಕೆಳಗಿಟ್ಟು ಶರಣಾದವರ ಪ್ರಾಣವನ್ನು ರಕ್ಷಿಸುತ್ತೇವೆ ಎಂದು ಹೇಳಿದೆ.

‘ಯೋಧರು ಶರಣಾಗುವುದನ್ನು ನಿಷೇಧಿಸಿ ಉಕ್ರೇನ್‌ನ ಸೇನಾ ಕಮಾಂಡ್ ಆದೇಶ ಹೊರಡಿಸಿದೆ. ಈ ವಿಚಾರ ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ.

ಪ್ರತಿರೋಧ ತೋರುವ ಎಲ್ಲರನ್ನೂ ನಾಶ ಮಾಡುತ್ತೇವೆ ಎಂದು ಅವರು ಗುಡುಗಿದ್ದಾರೆ.

ಮರಿಯುಪೋಲ್‌ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಮಧ್ಯಾಹ್ನ ಕಳವಳ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಉಕ್ರೇನ್ ಯೋಧರಿಗೆ ರಷ್ಯಾ ಎಚ್ಚರಿಕೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು