ಶುಕ್ರವಾರ, ಆಗಸ್ಟ್ 12, 2022
25 °C

ಕೊರೊನಾ ನಿಷ್ಕ್ರಿಯಕ್ಕೆ ಹೊಸ ವಿಧಾನ: ವಿಜ್ಞಾನಿಗಳ ಸಂಶೋಧನೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ : ಕೋವಿಡ್- 19ಕ್ಕೆ ಕಾರಣವಾಗುವ ಸಾರ್ಸ್‌ ಕೋವ್‌-2ನಂತಹ ಕೊರೊನಾ ವೈರಾಣು ಸೋಂಕಿನ ವಿರುದ್ಧ ಚಿಕಿತ್ಸೆಗೆ ಬಳಸಬಹುದಾದ ಔಷಧ ವಿಧಾನವೊಂದನ್ನು ಅಮೆರಿಕದ ವಿಜ್ಞಾನಿಗಳು ಗುರುತಿಸಿದ್ದಾರೆ. ಭವಿಷ್ಯದಲ್ಲಿ ಬರುವ ಕೊರೊನಾ ವೈರಾಣುಗಳನ್ನೂ ಈ ಔಷಧ ವಿಧಾನದಿಂದ ತಡೆಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಮೆರಿಕದ ನಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ಫಿನ್‌ಬೆರ್ಗ್ ಸ್ಕೂಲ್ ಆಫ್ ಮೆಡಿಸಿನ್‌ನ ವಿಜ್ಞಾನಿಗಳು ನಡೆಸಿರುವ ಈ ಅಧ್ಯಯನ ವರದಿಯು ಸಿಗ್ನಲಿಂಗ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಸಾರ್ಸ್‌ ಕೋವ್‌-2 ಕೊರೊನಾವೈರಾಣುವಿನ ಎನ್‌ಎಸ್‌ಪಿ16 ಎಂಬ ಪ್ರೊಟೀನ್‌ ಮೇಲೆ ಅಧ್ಯಯನ ನಡೆಸಿ, ಈ ಔಷಧ ವಿಧಾನವನ್ನು ರೂಪಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಎನ್‌ಎಸ್‌ಪಿ16 ಎಂಬ ಪ್ರೊಟೀನ್‌ ಬಹುತೇಕ ಎಲ್ಲಾ ಕೊರೊನಾವೈರಾಣುಗಳಲ್ಲೂ ಇರುತ್ತದೆ. ಸಾರ್ಸ್‌ಕೋವ್‌-2ನಲ್ಲೂ ಇದೆ. ಎಲ್ಲಾ ಕೊರೊನಾವೈರಾಣುಗಳಲ್ಲಿ ಈ ಪ್ರೊಟೀನ್‌ನ ರಚನೆ ಒಂದೇ ಸ್ವರೂಪದಲ್ಲಿ ಇದೆ. ಮನುಷ್ಯನ ದೇಹ ಸೇರಿದ ನಂತರ ವೈರಾಣುಗಳ ಸಂಖ್ಯೆ ಹೆಚ್ಚಾಗಲು ಈ ಪ್ರೊಟೀನ್‌ ನೆರವಾಗುತ್ತದೆ. ಈ ಪ್ರೊಟೀನ್‌ನ ವಂಶವಾಹಿಯ 3 ಆಯಾಮದ ಚಿತ್ರದ ಅಧ್ಯಯನ ನಡೆಸಿ
ದ್ದೇವೆ. ಪ್ರೊಟೀನ್‌ನಲ್ಲಿನ ಒಂದು ಅಯಾನ್ ಕಣವು, ವೈರಾಣುಗಳ ಸಂಖ್ಯೆಹೆಚ್ಚಳವನ್ನು ಉದ್ದೀಪಿಸುತ್ತದೆ. ಈ ಕಣವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿದೆ. ನಿಷ್ಕ್ರಿಯಗೊಳಿಸಿದರೆ ವೈರಾಣುಗಳ ಸಂಖ್ಯೆ ಹೆಚ್ಚಾಗುವುದನ್ನು ತಡೆಯಬ ಹುದು’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು