ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌: ಒಮ್ಮೆ ಕೊರೊನಾ‌ ಸೋಂಕು ಬಾಧಿತರಾದವರಿಗೆ ಮತ್ತೊಮ್ಮೆ ಸೋಂಕು

ಮೊದಲ ಪ್ರಕರಣ ಪತ್ತೆ, ರೋಗ ಲಕ್ಷಣಗಳಲ್ಲೂ ವ್ಯತ್ಯಾಸ, ಇನ್ನಷ್ಟು ಅಧ್ಯಯನ ನಡೆಯಬೇಕೆಂದ ವಿಜ್ಞಾನಿಗಳು
Last Updated 25 ಆಗಸ್ಟ್ 2020, 6:39 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ಒಮ್ಮೆ ಕೊರೊನಾ ವೈರಸ್‌ ಸೋಂಕು ಬಾಧಿತರಾದವರಿಗೆ ಮತ್ತೊಮ್ಮೆ ಹೊಸ ಲಕ್ಷಣಗಳೊಂದಿಗೆ ಸೋಂಕು ತಗುಲಬಹುದು ಎಂಬುದಕ್ಕೆ ಪುರಾವೆಗಳಿರುವುದಾಗಿ ಹಾಂಗ್‌ ಕಾಂಗ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಕೊರೊನಾ ವೈರಸ್‌ ಸೊಂಕು ದೃಢಪಟ್ಟ ಹಾಂಗ್‌ಕಾಂಗ್‌ನ 33 ವರ್ಷದ ವ್ಯಕ್ತಿಯೊಬ್ಬರು, ಆಗಸ್ಟ್‌ ತಿಂಗಳ ಮಧ್ಯದಲ್ಲಿ ಹಾಂಗ್‌ಕಾಂಗ್‌ನಿಂದ ಸ್ಪೇನ್‌ಗೆ ಪ್ರವಾಸ ಹೋಗಿ ಬಂದಿದ್ದಾರೆ. ಅವರನ್ನು ಏರ್‌ಪೋರ್ಟ್‌ನಲ್ಲಿ ಸ್ಕ್ರೀನಿಂಗ್‌ಗೆ ಒಳಪಡಿಸಿದಾಗ, ಪುನಃ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮೈಕ್ರೋಬಯಾಲಜಿಸ್ಟ್ ಡಾ. ಕೆಲ್ವಿನ್‌ ಕೈ–ವಾಂಗ್‌ ಟು ಹೇಳಿದ್ದಾರೆ.

‘ಈ ವ್ಯಕ್ತಿಯಲ್ಲಿಮೊದಲ ಬಾರಿಗೆ ಸೋಂಕು ತಗುಲಿದಾಗ ಗೋಚರಿಸಿದ ಸೌಮ್ಯ ರೂಪದ ರೋಗ ಲಕ್ಷಣಗಳು, ಎರಡನೇ ಬಾರಿಗೆ ಸೋಂಕು ಪರೀಕ್ಷೆಗೊಳಪಡಿಸುವಾಗ ರೋಗ ಲಕ್ಷಣಗಳು ಇರಲಿಲ್ಲ ’ ಎಂದು ಅವರು ಹೇಳಿದ್ದಾರೆ.

’ಈ ಪ್ರಕರಣದಿಂದ ಒಮ್ಮೆ ಈ ವೈರೈಸ್‌ ಸೋಂಕಿಗೆ ಒಳಗಾಗಿ ಗುಣಮುಖರಾಗಿರುವ ಕೆಲವು ವ್ಯಕ್ತಿಗಳು ಜೀವನ ಪೂರ್ತಿ ರೋಗನಿರೋಧಕ ಶಕ್ತಿ ಹೊಂದಿರುವುದಿಲ್ಲ ಎಂದು ಗೊತ್ತಾಗಿದೆ. ಆದರೆ, ಎಷ್ಟು ಮಂದಿ ಪುನಃ ಸೋಂಕಿಗೆ ಒಳಗಾಗುತ್ತಾರೆ ಎಂಬುದು ಗೊತ್ತಿಲ್ಲ’ ಎಂದು ಡಾ.ಕೆಲ್ವಿನ್ ಅಭಿಪ್ರಾಯಪಟ್ಟಿದ್ದಾರೆ.

‘ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್‌ ಜರ್ನಲ್’, ಈ ಹೊಸ ಮಾಹಿತಿಯನ್ನೊಳಗೊಂಡ ಸಂಶೋಧನಾ ಪ್ರಬಂಧವನ್ನು ಸ್ವೀಕರಿಸಿದೆ. ಆದರೆ, ಇನ್ನೂ ಪ್ರಕಟಿಸಿಲ್ಲ. ಕೆಲವು ಪರಿಣಿತ ಸಂಶೋಧಕರು, ತಜ್ಞರು ಈ ಬಗ್ಗೆ ಇನ್ನಷ್ಟು ಅಧ್ಯಯನಗಳಾಗಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT