ಮಂಗಳವಾರ, ಸೆಪ್ಟೆಂಬರ್ 28, 2021
25 °C

ಪೆರು: ಕಂದಕಕ್ಕೆ ಉರುಳಿದ ಬಸ್; 32 ಮಂದಿ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಿಮಾ: ಪೆರುವಿನಲ್ಲಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 32 ಪ್ರಯಾಣಿಕರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಲಿಮಾದಿಂದ 60 ಕಿ.ಮೀ. ಪೂರ್ವಕ್ಕೆ ಕ್ಯಾರೆಟೆರಾ ಸೆಂಟ್ರೆಲ್ ರಸ್ತೆಯ ಕಿರಿದಾದ ಪ್ರದೇಶದಲ್ಲಿ ದುರ್ಘಟನೆ ನಡೆದಿದೆ. 

ಒಟ್ಟು 63 ಪ್ರಯಾಣಿಕರು ಬಸ್‌ನಲ್ಲಿದ್ದರು. ಮೃತಪಟ್ಟವರಲ್ಲಿ ಆರು ವರ್ಷದ ಬಾಲಕ ಮತ್ತು ಮೂರು ವರ್ಷದ ಬಾಲಕಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 

ಚಾಲಕ ಅಮಿತ ವೇಗದಲ್ಲಿ ಬಸ್ ಚಲಾಯಿಸಿರುವುದು ಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಡೆಕಲ್ಲಿಗೆ ಢಿಕ್ಕಿ ಹೊಡೆದ ಬಸ್ 650 ಅಡಿ ಆಳದ ಕಂದಕಕ್ಕೆ ಉರುಳಿದೆ ಎಂದು ಬದುಕುಳಿದವರು ತಿಳಿಸಿದ್ದಾರೆ.

ಭಾನುವಾರ ಪೆರುವಿನಲ್ಲಿ ಅಮೆಜಾನ್ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿ ಹೊಡೆದು 22 ಮಂದಿ ಮೃತಪಟ್ಟಿದ್ದರು. ಎರಡು ದಿನಗಳ ಹಿಂದೆ ಪೆರುವಿನ ಆಗ್ನೇಯ ಪ್ರದೇಶದಲ್ಲಿ ಬಸ್ ಪ್ರಪಾತಕ್ಕೆ ಉರುಳಿ 17 ಮಂದಿ ಸಾವಿಗೀಡಾಗಿದ್ದರು.

ಅಮಿತ ವೇಗ, ಕಳಪೆ ಹೆದ್ದಾರಿ ನಿರ್ವಹಣೆ, ರಸ್ತೆ ಚಿಹ್ನೆಗಳ ಅಭಾವದಿಂದಾಗಿ ಪೆರುವಿನಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು