ಸೋಮವಾರ, ಜೂನ್ 14, 2021
27 °C

ಸ್ಪೇನ್‌ನಲ್ಲಿ ಕೋವಿಡ್‌ ತುರ್ತು ಪರಿಸ್ಥಿತಿ ಅಂತ್ಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ಸ್ಪೇನ್‌ನಲ್ಲಿ ಕೋವಿಡ್‌ ಪ್ರಸರಣವನ್ನು ತಡೆಯಲು ಅಕ್ಟೋಬರ್‌ನಲ್ಲಿ ಘೋಷಿಸಲಾಗಿದ್ದ ಕೋವಿಡ್‌ ತುರ್ತು ಪರಿಸ್ಥಿತಿಯನ್ನು ಸರ್ಕಾರ ಅಂತ್ಯಗೊಳಿಸಿದೆ. ಹಲವು ತಿಂಗಳುಗಳ ಬಳಿಕ ಮೊದಲ ಬಾರಿ ನಾಗರಿಕರಿಗೆ ಪ್ರದೇಶಗಳ ನಡುವೆ ಪ್ರಯಾಣಿಸಲು ಅನುಮತಿಯನ್ನು ನೀಡಲಾಗಿದೆ.

‘ಇದು ಹೊಸ ವರ್ಷದಂತಿದೆ. ಸರ್ಕಾರದ ಈ ನಿರ್ಧಾರವನ್ನು ಚಪ್ಪಾಳೆ ಮತ್ತು ಸಂಗೀತದ ಮೂಲಕ ಸ್ವಾಗತಿಸಲಾಯಿತು. ನಾವು ಸಾಮಾನ್ಯ ಜೀವನಕ್ಕೆ ಹಂತ ಹಂತವಾಗಿ ಮರಳುತ್ತಿದ್ದೇವೆ. ಆದರೆ ನಮ್ಮ ನಡುವೆ ವೈರಸ್‌ ಈಗಲೂ ಇದೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಬಾರ್ಸಿಲೋನಾ ನಿವಾಸಿ ಓರಿಯೊಲ್ ಕಾರ್ಬೆಲ್ಲಾ ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿಯು ಪ್ರದೇಶಗಳ ನಡುವಿನ ಅಗತ್ಯವಲ್ಲದ ಪ್ರಯಾಣಗಳನ್ನು ನಿರ್ಬಂಧಿಸಿತ್ತು. ಅಲ್ಲದೆ ರಾತ್ರಿ ಕರ್ಫ್ಯೂವನ್ನು ಕೂಡ ವಿಧಿಸಲಾಗಿತ್ತು. ಆದರೆ ಕ್ರಿಸ್‌ಮಸ್‌ ದಿನದಂದು ಈ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿತ್ತು. 

‘ಸದ್ಯ ಪ್ರದೇಶಗಳ ನಡುವಿನ ಪ್ರಯಾಣದ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆಯಲಾಗಿದೆ. ಆದರೆ ಸ್ಥಳೀಯ ಆಡಳಿತವು ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಕಾರ್ಯನಿರ್ವಹಿಸುವ ಅವಧಿ ಮತ್ತು ಸಾಮರ್ಥ್ಯದ ಮೇಲೆ ನಿರ್ಬಂಧ ಹೇರಬಹುದು. ಅಲ್ಲದೆ ನ್ಯಾಯಾಲಯದ ಅನುಮತಿ ಪಡೆದು ಕರ್ಫ್ಯೂಗಳಂತಹ ನಿರ್ಬಂಧಗಳನ್ನು ಹೇರಬಹುದಾಗಿದೆ’ ಎಂದು ಮೂಲಗಳು ಹೇಳಿವೆ.

ಸ್ಪೇನ್‌ನಲ್ಲಿ ಈವರೆಗೆ 35 ಲಕ್ಷ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 79 ಸಾವಿರ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು