ಸೌಂದರ್ಯ ಸ್ಪರ್ಧೆ ವಿಜೇತೆ ಕಿರೀಟ ಕಿತ್ತುಕೊಂಡ ಮಾಜಿ ಸುಂದರಿ: ವಿವಾದಕ್ಕೇನು ಕಾರಣ?

ಕೊಲೊಂಬೊ: ಶ್ರೀಲಂಕಾದಲ್ಲಿ ಆಯೋಜಿಸಲಾಗಿದ್ದ ಸೌಂದರ್ಯ ಸ್ಪರ್ಧೆಯೀಗ ಜಗತ್ತಿನಾದ್ಯಂತ ಭಾರೀ ವಿವಾದವೊಂದನ್ನು ಹುಟ್ಟುಹಾಕಿದೆ.
ಮಿಸೆಸ್ ಶ್ರೀಲಂಕಾ -2021ರ ವಿಜೇತೆಯ ತಲೆ ಮೇಲಿದ್ದ ಕಿರೀಟವನ್ನು ಕಿತ್ತುಕೊಂಡ ಮಾಜಿ ವಿಜೇತೆಯು ವೇದಿಕೆಯ ಮೇಲೆಯೇ ಅವಹೇಳನಕರ ಹೇಳಿಕೆಗಳನ್ನು ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಪ್ರಪಂಚದಾದ್ಯಂತ ಸಾರ್ವಜನಿಕರ ಕೋಪಕ್ಕೆ ಗುರಿಯಾಗಿದೆ.
ಭಾನುವಾರ ನಡೆದಿದ್ದ ಮಿಸೆಸ್ ಶ್ರೀಲಂಕಾ- 2021 ಸೌಂದರ್ಯ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ. ಪುಷ್ಪಿಕಾ ಡಿ ಸಿಲ್ವ ಎಂಬುವವರು ಮಿಸೆಸ್ ಶ್ರೀಲಂಕಾ- 2021 ವಿಜೇತೆಯಾಗಿ ಆಯ್ಕೆಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಕಿರೀಟವನ್ನು ತೊಡಿಸಲಾಗಿದೆ.
ಆ ಸಮಯದಲ್ಲಿ ವೇದಿಕೆಯ ಮೇಲೆಯೇ ನಿಂತಿದ್ದ ಮಿಸೆಸ್ ಶ್ರೀಲಂಕಾ-2020ರ ವಿಜೇತೆ ಕ್ಯಾರೋಲಿನ್ ಜೂರಿ ಅವರು ಪುಷ್ಪಿಕಾ ತಲೆಗೆ ತೊಡಿಸಿದ್ದ ಕಿರೀಟವನ್ನು ಕಿತ್ತುಕೊಂಡಿದ್ದಾರೆ.
ಆ ನಂತರ ಮೈಕ್ನಲ್ಲಿ ಮಾತನಾಡಿರುವ ಅವರು, 'ಪುಷ್ಪಿಕಾ ಡಿ ಸಿಲ್ವ ಓರ್ವ ವಿಚ್ಛೇದಿತ ಮಹಿಳೆ. ಕಿರೀಟವನ್ನು ಹೊಂದಲು ಪುಷ್ಪಿಕಾ ಅರ್ಹಳೇ ಅಲ್ಲ. ನಾನು ಈ ಕಿರೀಟವನ್ನು ಕಿತ್ತುಕೊಂಡು ದ್ವಿತೀಯ ವಿಜೇತೆಗೆ ತೊಡಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
ಈ ವಿವಾದದ ಬಗ್ಗೆ ಹೇಳಿಕೆ ನೀಡಿರುವ ಕಾರ್ಯಕ್ರಮದ ಆಯೋಜಕರು, 'ಪುಷ್ಪಿಕಾ ಅವರು ಮದುವೆಯಾಗಿರುವುದು ನಿಜ. ಆದರೆ, ಅವರೀಗ ಪತಿಯ ಜತೆ ಜೀವನ ನಡೆಸುತ್ತಿಲ್ಲ. ಆ ಕಾರಣ ಅವರನ್ನು ವಿಚ್ಛೇದಿತ ಮಹಿಳೆ ಎಂದು ಹೇಳಲು ಸಾಧ್ಯವಿಲ್ಲ' ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.
She walked up to me so gracefully and took my Crown of Thorns..#MrsSriLanka pic.twitter.com/fFo3nf4w2f
— Amal Abeyawardene (@amalab) April 4, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.