ಶುಕ್ರವಾರ, ಮಾರ್ಚ್ 31, 2023
23 °C

ಪೆಶಾವರ ಆತ್ಮಾಹುತಿ ದಾಳಿ: ಮೃತರ ಸಂಖ್ಯೆ 100ಕ್ಕೆ ಏರಿಕೆ, ಉಗ್ರನ ರುಂಡ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ಪೆಶಾವರ: ಇಲ್ಲಿನ ಪೊಲೀಸ್‌ ಪ್ರಧಾನ ಕಚೇರಿ ಸಮೀಪದ ಬಿಗಿ ಭದ್ರತೆಯ ಮಸೀದಿಯಲ್ಲಿ ಸೋಮವಾರ ಸಂಭವಿಸಿದ  ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದ್ದು, 221 ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಶಂಕಿತ ಉಗ್ರನ ರುಂಡ ಪತ್ತೆಯಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಕೋರನು ಈ ಮೊದಲೇ ಪೊಲೀಸ್ ಲೈನ್‌ ಪ್ರಾಂತ್ಯದಲ್ಲಿ ಇದ್ದ ಹಾಗೂ ಮಸೀದಿ ಒಳಗೆ ಪ್ರವೇಶಿಸಲು ಅಧಿಕೃತ ವಾಹನವನ್ನು ಬಳಸಿರಬಹುದು. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸ್ಫೋಟದ ನಿಖರ ಸ್ವರೂಪ ತಿಳಿಯಲಿದೆ ಎಂದು ಪೆಶಾವರ ನಗರದ ಪೊಲೀಸ್‌ ಅಧಿಕಾರಿ ಮೊಹಮ್ಮದ್ ಐಜಾಜ್ ಖಾನ್ ತಿಳಿಸಿದ್ದಾರೆ.

ಪ್ರಾರ್ಥನೆ ಮಾಡುವವರೊಂದಿಗೆ ಮೊದಲ ಸಾಲಿನಲ್ಲೇ ನಿಂತಿದ್ದ ಆತ್ಮಾಹುತಿ ಬಾಂಬರ್‌ ತನ್ನನ್ನು ತಾನು ಸ್ಫೋಟಿಸಿಕೊಂಡ ತಕ್ಷಣ ಮಸೀದಿಯ ಚಾವಣಿ ಕುಸಿದು ಬಿತ್ತು. ಅದರ ಅವಶೇಷಗಳ ಅಡಿಯಲ್ಲಿ ನೂರಾರು ಜನ ಸಿಲುಕಿಕೊಂಡರು. ಹೀಗಾಗಿ ಸಾವು, ನೋವಿನ ಪ್ರಮಾಣ ಅಧಿಕವಾಯಿತು ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು