ತೈಪೆ: ತೈವಾನ್ ಸಮೀಪ ಚೀನಾ ಸೋಮವಾರ ಹೊಸದಾಗಿ ಸಮರಾಭ್ಯಾಸ ನಡೆಸಿರುವ ನಡುವೆಯೇ ತೈವಾನ್ ಕೂಡ ಸಮರಾಭ್ಯಾಸ ನಡೆಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದೆ.

‘ಚೀನಾದ ಆಕ್ರಮಣದ ವಿರುದ್ಧ ದೇಶವನ್ನು ರಕ್ಷಿಸಿಕೊಳ್ಳುವ ಸಮರಾಭ್ಯಸವನ್ನು ತೈವಾನ್ ಈ ವಾರ ನಡೆಸಲಿದೆ’ ಎಂದು ಅಲ್ಲಿನ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಇದನ್ನೂ ನೋಡಿ:Photos| ಚೀನಾ ಜೊತೆಗಿನ ಮನಸ್ತಾಪದ ನಡುವೆಯೇ ತೈವಾನ್ ಭಾರಿ ಸಮರಾಭ್ಯಾಸ

‘ನಮ್ಮ ರಕ್ಷಣಾ ಪಡೆಗಳು ಮಂಗಳವಾರ ಮತ್ತು ಗುರುವಾರದಂದು ದೇಶದ ದಕ್ಷಿಣ ಭಾಗದಲ್ಲಿರುವ ಪಿಂಗ್ಟಂಗ್ನಲ್ಲಿ ‘ಆ್ಯಂಟಿ–ಲ್ಯಾಂಡಿಂಗ್’ ಅಭ್ಯಾಸ ನಡೆಸಲಿದೆ’ ತೈವಾನ್ ಸೇನೆ ತಿಳಿಸಿದೆ.

‘ತೈವಾನ್ನ ಮೇಲೆ ಶತ್ರುಗಳು ನಡೆಸುವ ದಾಳಿಯ ವಿರುದ್ಧ ನಾವು ನಡೆಸಬೇಕಾದ ಪ್ರತಿದಾಳಿಯ ಅಭ್ಯಾಸವನ್ನು ಮಾಡಲಿದ್ದೇವೆ’ ಎಂದು ಸೇನಾ ವಕ್ತಾರ ಲಾವ್ ವೊಯಿ-ಜೆ ಅವರು ಸುದ್ದಿ ಸಂಸ್ಥೆ ಎಎಫ್ಪಿಗೆ ತಿಳಿಸಿದರು.

ಸಮರಾಭ್ಯಾಸದಲ್ಲಿ ನೂರಾರು ಸೈನಿಕರು ಪಾಲ್ಗೊಳ್ಳಲಿದ್ದಾರೆ. ಸುಮಾರು 40 ಫಿರಂಗಿಗಳು ಇರಲಿವೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ಗೆ ಬಂದು ಹೋದ ಬಳಿಕ, ಚೀನಾ ವಾಯುಪಡೆ ಮತ್ತು ನೌಕಾಪಡೆಗಳ ಜಂಟಿ ಸಮರಾಭ್ಯಾಸವನ್ನು ದ್ವೀಪ ರಾಷ್ಟ್ರದ ಸುತ್ತಲೂ ನಡೆಸಿದೆ. ಸಮರಾಭ್ಯಾಸವನ್ನು ನಿಲ್ಲಿಸಬೇಕು ಎಂದು ಹಲವು ದೇಶಗಳು ಎಚ್ಚರಿಕೆ ನೀಡಿದ್ದರೂ, ಅವುಗಳನ್ನು ಕಡೆಗಣಿಸಿರುವ ಚೀನಾ ಸೋಮವಾರ ಹೊಸದಾಗಿ ಅಭ್ಯಾಸ ನಡೆಸಿದೆ.

ಆದರೂ, ಸದ್ಯ ಚೀನಾ ನಡೆಸುತ್ತಿರುವ ಸಮರಾಭ್ಯಾಸಕ್ಕೆ ಪ್ರತಿಯಾಗಿ ನಾವು ಅಭ್ಯಾಸಕ್ಕೆ ಮುಂದಾಗಿಲ್ಲ ಎಂದು ತೈವಾನ್ ಮಿಲಿಟಿರಿ ವಕ್ತಾರ ಲಾವ್ ಸ್ಪಷ್ಟಪಡಿಸಿದ್ದಾರೆ. ಈ ಅಭ್ಯಾಸವು ಮೊದಲೇ ನಿಗದಿಯಾಗಿತ್ತು. ಅದರಂತೆ ಈಗ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಚೀನಾದಿಂದ ಯಾವುದೇ ಕ್ಷಣದಲ್ಲಿ ದಾಳಿ ನಡೆಯಬಹುದಾದ ಭಯದ ನೆರಳಲ್ಲೇ ಇರುವ ತೈವಾನ್ ಆಗಾಗ ಸಮರಾಭ್ಯಾಸ ನಡೆಸುವುದು ವಾಡಿಕೆ. ಕಳೆದ ತಿಂಗಳು ತನ್ನ ಅತಿದೊಡ್ಡ ವಾರ್ಷಿಕ ಸಮರಾಭ್ಯಾಸವನ್ನು ತೈವಾನ್ ನಡೆಸಿತ್ತು. ಸಮುದ್ರ ಮಾರ್ಗವಾಗಿ ಎದುರಾಗುವ ದಾಳಿಯನ್ನು ಹಿಮ್ಮೆಟ್ಟಿಸುವ ‘ಜಂಟಿ ಪ್ರತಿಬಂಧ ಕಾರ್ಯಾಚರಣೆ’ಯನ್ನು ಅದು ನಡೆಸಿತ್ತು.

ಚೀನಾದ ಕಾರ್ಯಾಚರಣೆ ಭಾನುವಾರ ಅಂತ್ಯವಾಗಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಅದು ಮುಂದುವರಿಯಲಿದೆ ಎಂದು ಸೋಮವಾರ ಚೀನಾ ಹೇಳಿದೆ.

ಇವುಗಳನ್ನೂ ಓದಿ...

*ಚೀನಾ ಲೆಕ್ಕಿಸದೇ ತೈವಾನ್ ತಲುಪಿದ ಪೆಲೋಸಿ
*ನ್ಯಾನ್ಸಿ ಪೆಲೊಸಿ ಭೇಟಿ ವಿರೋಧಿಸಿ ತೈವಾನ್ ಮೇಲೆ ಚೀನಾದಿಂದ ವ್ಯಾಪಾರ ನಿರ್ಬಂಧ
*ಅಮೆರಿಕ–ತೈವಾನ್ ಮೇಲೆ ಕಠಿಣ ಪ್ರತೀಕಾರ: ಗುಡುಗಿದ ಚೀನಾ
*ತೈವಾನ್ ಪ್ರತ್ಯೇಕಿಸಲು ಬಿಡೆವು: ಚೀನಾ ಉದ್ದೇಶಿಸಿ ನ್ಯಾನ್ಸಿ ಪೆಲೊಸಿ ಹೇಳಿಕೆ
*ತೈವಾನ್ ಬಿಕ್ಕಟ್ಟಿನ ನಡುವೆಯೇ ಚೀನಾ ಗಡಿ ಸನಿಹ ಭಾರತ–ಅಮೆರಿಕ ಮೆಗಾ ಸಮರಾಭ್ಯಾಸ
*ತೈವಾನ್ ಗುರಿಯಾಗಿಸಿ 11 ಖಂಡಾಂತರ ಕ್ಷಿಪಣಿ ಉಡಾಯಿಸಿದ ಚೀನಾ
*ಅಮೆರಿಕದ ಬಾಂಧವ್ಯಕ್ಕೆ ಚೀನಾ ತಿಲಾಂಜಲಿ: ತೈವಾನ್ ಸುತ್ತ ಸೇನಾ ತಾಲೀಮು ತೀವ್ರ
*ದ್ವೀಪಗಳ ಬಳಿ ಡ್ರೋನ್ಗಳ ಹಾರಾಟ: ಎಚ್ಚರಿಕೆ ಸಂದೇಶ ರವಾನಿಸಿದ ತೈವಾನ್
*ತೈವಾನ್ ಕ್ಷಿಪಣಿ ಉತ್ಪಾದನೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿ ಶವವಾಗಿ ಪತ್ತೆ
*ಗಡಿದಾಟಿದ ಚೀನಾದ ವಿಮಾನ, ನೌಕೆಗಳು; ಆಕ್ರಮಣಕ್ಕೆ ತಾಲೀಮು: ತೈವಾನ್ ಆರೋಪ
*ಅಮೆರಿಕ, ಜಪಾನ್ ಆಗ್ರಹ ಧಿಕ್ಕರಿಸಿ ತೈವಾನ್ ಸುತ್ತ ಸಮರಾಭ್ಯಾಸ ಮುಂದುವರಿಸಿದ ಚೀನಾ
*ಸೇನಾ ತಾಲೀಮು ಕೈಬಿಡಲು ಚೀನಾಗೆ ವಿವಿಧ ರಾಷ್ಟ್ರಗಳ ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.