ಶನಿವಾರ, ಜನವರಿ 29, 2022
22 °C

ತಾಲಿಬಾನ್‌ ಆಡಳಿತ ಟೀಕಿಸುತ್ತಿದ್ದ ಆಫ್ಗನ್‌ ಪ್ರೊಫೆಸರ್‌ ಬಂಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌ (ಎಪಿ): ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಹಾಗೂ ಹಿಂದಿನ ಆಡಳಿತಗಳ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿದ್ದ  ಕಾಬೂಲ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಫೈಜುಲ್ಲಾ ಜಲಾಲ್‌ ಎಂಬುವವರನ್ನು ಬಂಧಿಸಲಾಗಿದೆ ಎಂದು ತಾಲಿಬಾನ್‌ ವಕ್ತಾರ ಝಬಿಹುಲ್ಲಾ ಮುಜಾಹಿದ್‌ ಭಾನುವಾರ ತಿಳಿಸಿದ್ದಾರೆ.

‘ತಾಲಿಬಾನ್‌ ಗುಪ್ತಚರ ವಿಭಾಗವು ಪ್ರೊಫೆಸರ್‌ ಜಲಾಲ್‌ ಅವರನ್ನು ಬಂಧಿಸಿದೆ. ಪ್ರೊಫೆಸರ್‌ ಅವರು ತಾಲಿಬಾನ್‌ ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸುವ, ಸರ್ಕಾರದ ಘನತೆಯನ್ನು ಕುಂದಿಸುವ ಅಸಂಬದ್ಧ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೀಡುತ್ತಿದ್ದರು’ ಎಂದು ಮುಜಾಹಿದ್‌ ಟ್ವೀಟ್‌ವೊಂದರಲ್ಲಿ ಹೇಳಿದ್ದಾರೆ.

ಜಲಾಲ್‌ ಅವರು 2004ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಮೀದ್ ಕರ್ಜೈ ಅವರ ವಿರುದ್ಧ ಸ್ಪರ್ಧಿಸಿದ್ದ ಮಸೂದಾ ಜಲಾಲ್‌ ಅವರ ಪತಿ. ತನ್ನ ತಂದೆಯನ್ನು ಬಿಡುಗಡೆ ಮಾಡುವಂತೆ ಜಲಾಲ್‌ ಅವರ ಪುತ್ರಿ ಹಸೀನಾ ಜಲಾಲ್‌ ಟ್ವೀಟ್‌ ಮಾಡಿ ಒತ್ತಾಯಿಸಿದ್ದಾರೆ.‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು