ಗುರುವಾರ , ಸೆಪ್ಟೆಂಬರ್ 23, 2021
26 °C

ಸರ್ಕಾರ ರಚನೆ ಕಸರತ್ತು: ಆಫ್ಗನ್‌ ಮಾಜಿ ಅಧ್ಯಕ್ಷರನ್ನು ಭೇಟಿಯಾದ ತಾಲಿಬಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Twitter/@TOLOnews

ಕಾಬುಲ್‌: ಕೈವಶ ಮಾಡಿಕೊಂಡಿರುವ ಅಪ್ಗಾನಿಸ್ತಾನದಲ್ಲಿ ಸರ್ಕಾರ ರಚಿಸಲು ಹೆಣಗುತ್ತಿರುವ ತಾಲಿಬಾನ್‌ ಅಲ್ಲಿನ ರಾಜಕಾರಣಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದೆ.

ತಾಲಿಬಾನ್‌ ಕಮಾಂಡರ್‌ ಮತ್ತು ಉಗ್ರ ಸಂಘಟನೆಗಳ ಹಕ್ಕಾನಿ ಉಗ್ರಜಾಲದ ಹಿರಿಯ ಮುಖಂಡ ಅನಸ್‌ ಹಕ್ಕಾನಿ ಬುಧವಾರ ಆಫ್ಗನ್‌ನ ಮಾಜಿ ಅಧ್ಯಕ್ಷ ಹಮಿದ್‌ ಕರ್ಜಾಯ್‌ ಅವರನ್ನು ಭೇಟಿ ಮಾಡಿದ್ದಾನೆ.

ಭೇಟಿ ವೇಳೆ ಕರ್ಜಾಯ್‌ ಜೊತೆ ಹಳೆಯ ಸರ್ಕಾರದ ಪ್ರಮುಖ ಶಾಂತಿದೂತ ಎಂದು ಕರೆಯಿಸಿಕೊಂಡಿರುವ ಅಬ್ದುಲ್ಲಾ ಅಬ್ದುಲ್ಲಾ ಇದ್ದರು ಎಂದು ತಾಲಿಬಾನ್‌ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಭೇಟಿ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ ಎಂದು ಅಫ್ಗಾನಿಸ್ತಾನದ ಮಾಧ್ಯಮ 'ಟೊಲೊನ್ಯೂಸ್‌' ವರದಿ ಮಾಡಿದೆ.

ಭಾನುವಾರ ಅಫ್ಗಾನಿಸ್ತಾನದ ರಾಜಧಾನಿ ಕಾಬುಲ್‌ಅನ್ನು ವಶಪಡಿಸಿಕೊಂಡ ತಾಲಿಬಾನ್‌ ಕಾರ್ಯಾಚರಣೆಯಲ್ಲಿ ಹಕ್ಕಾನಿ ನೆಟ್‌ವರ್ಕ್‌ ಪ್ರಮುಖ ಪಾತ್ರ ವಹಿಸಿದೆ. ಪಾಕಿಸ್ತಾನದ ಗಡಿಯಲ್ಲಿ ನೆಲೆಸಿರುವ ಈ ಉಗ್ರಜಾಲವು ಕಳೆದ ಕೆಲವು ವರ್ಷಗಳಲ್ಲಿ ಅಫ್ಗಾನಿಸ್ತಾನದ ಮೇಲೆ ಹಲವು ಮಾರಣಾಂತಿಕ ದಾಳಿ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು