ಕಾಬೂಲ್: ಅಫ್ಗಾನಿಸ್ತಾನದ ಅಧ್ಯಕ್ಷರ ನಿವಾಸ ನಮ್ಮ ನಿಯಂತ್ರಣದಲ್ಲಿದೆ ಎಂದು ಕಾಬೂಲ್‌ನಲ್ಲಿರುವ ತಾಲಿಬಾನ್‌ನ ಇಬ್ಬರು ಹಿರಿಯ ಕಮಾಂಡರ್‌ಗಳು ತಿಳಿಸಿದ್ದಾರೆ.

ಅಧ್ಯಕ್ಷ ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕಮಾಂಡರ್‌ಗಳು ಈ ಹೇಳಿಕೆ ನೀಡಿದ್ದಾರೆ.

ಆದರೆ, ತಾಲಿಬಾನ್‌ನ ಈ ಹೇಳಿಕೆ ಬಗ್ಗೆ ಅಫ್ಗಾನಿಸ್ತಾನ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸರ್ಕಾರಿ ಅಧಿಕಾರಿಗಳು ತಕ್ಷಣ ಸಂಪರ್ಕಕ್ಕೆ ದೊರೆತಿಲ್ಲ ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಓದಿ:ಆಫ್ಗನ್ ಬಿಕ್ಕಟ್ಟು: 129 ಜನ ಒಳಗೊಂಡ ಏರ್ ಇಂಡಿಯಾ ವಿಮಾನ ಕಾಬೂಲ್‌ನಿಂದ ದೆಹಲಿಗೆ

ಇದಕ್ಕೂ ಮುನ್ನ, ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ರಾಯಿಟರ್ಸ್’ ವರದಿ ಮಾಡಿತ್ತು.

ಈ ಕುರಿತು ಮಾಹಿತಿ ನೀಡಲು ಅಧ್ಯಕ್ಷರ ಕಚೇರಿ ನಿರಾಕರಿಸಿತ್ತು. ಭದ್ರತಾ ಕಾರಣಗಳಿಗಾಗಿ ಅಶ್ರಫ್ ಘನಿ ಅವರ ಕುರಿತಾದ ಮಾಹಿತಿ ನೀಡಲಾಗದು ಎಂದು ಕಚೇರಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.