ವಾಷಿಂಗ್ಟನ್: ‘ತನ್ನ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಗೌರವಿಸುವುದು, ಪ್ರಯಾಣ ಕೈಗೊಳ್ಳುವ ಸ್ವಾತಂತ್ರ್ಯ ನೀಡುವುದು ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಬದ್ಧತೆ ಪ್ರದರ್ಶಿಸುವ ಮೂಲಕ ತಾಲಿಬಾನ್, ವಿಶ್ವ ಸಮುದಾಯದ ಬೆಂಬಲ ಗಳಿಸಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಹೇಳಿದ್ದಾರೆ.

ಅಫ್ಗಾನಿಸ್ತಾನದಿಂದ ಅಮೆರಿಕದ ಪಡೆಗಳ ನಿರ್ಗಮನ ಕಾರ್ಯ ಪೂರ್ಣಗೊಂಡ ಬಳಿಕ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ತಾಲಿಬಾನ್ ತಾನು ರಚಿಸುವ ಸರ್ಕಾರಕ್ಕೆ ಜಾಗತಿಕ ಸಮುದಾಯದ ಬೆಂಬಲ ಹಾಗೂ ಸಮರ್ಥನೆಯನ್ನು ಕೇಳುತ್ತಿದೆ. ಆದರೆ, ತಾನು ಕೊಟ್ಟ ಮಾತಿನಂತೆ ನಡೆಯುವ ಮೂಲಕ ಇಂಥ ಸಮರ್ಥನೆ ಹಾಗೂ ಬೆಂಬಲವನ್ನು ಅದು ಗಳಿಸಬೇಕು’ ಎಂದು ಬ್ಲಿಂಕೆನ್ ಹೇಳಿದರು.

‘ತಾಲಿಬಾನ್ ನೇತೃತ್ವದ ಸರ್ಕಾರದೊಂದಿಗೆ ಅಮೆರಿಕ ಕಾರ್ಯ ನಿರ್ವಹಿಸಲಿದೆ. ಆದರೆ, ತಾಲಿಬಾನ್ ಸರ್ಕಾರದ ಹೇಳಿಕೆಗಳ ಬದಲಾಗಿ ಅದು ತಾನು ನೀಡಿದ್ದ ಭರವಸೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ ಎಂಬುದರ ಮೇಲೆ ಇದು ಅವಲಂಬಿಸಿದೆ’ ಎಂದೂ ಸ್ಪಷ್ಟಪಡಿಸಿದರು.

‘ಆ ದೇಶದ ಅಲ್ಪ ಸಂಖ್ಯಾತರ ಹಾಗೂ ಮಹಿಳೆಯರ ಹಕ್ಕುಗಳನ್ನು ದಮನ ಮಾಡಬಾರದು. ಎಲ್ಲರ ಒಳಗೊಳ್ಳುವಿಕೆ ಇರುವ ಸರ್ಕಾರವನ್ನು ತಾಲಿಬಾನ್ ರಚಿಸಬೇಕು’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.