ಹಾಂಕಾಂಗ್: ತನ್ನ ಸಹೋದ್ಯೋಗಿಯೊಂದಿಗಿದ್ದ ಮನಸ್ತಾಪದ ಕಾರಣ, 25 ಮಕ್ಕಳಿಗೆ ವಿಷವುಣಿಸಿ, ಒಬ್ಬರನ್ನು ಕೊಂದ ಆರೋಪದ ಮೇಲೆ ಮಧ್ಯ ಕಿಂಡನ್ಗಾರ್ಟನ್ ಶಿಕ್ಷಕಿಯೊಬ್ಬರಿಗೆ ಚೀನಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಶಿಕ್ಷಕಿ ವಾಂಗ್ ಯುನ್ ಮರದಂಡನೆ ಶಿಕ್ಷೆಗೆ ಗುರಿಯಾದವರು. ಅವರು ಮಾ.27, 2019ರಂದು ಶಾಲೆಯಲ್ಲಿ ಮಕ್ಕಳು ಸೇವಿಸುವ ಗಂಜಿಗೆ (ಉಪಹಾರಕ್ಕೆ) ನೈಟ್ರೇಟ್ ರಾಸಾಯನಿಕ ಬೆರೆಸಿದ್ದರು ಎಂದು ವಿಚಾರಣೆ ನಡೆಸಿದ ಹೆನಾನ್ ಪ್ರಾಂತ್ಯದ ಜಿಯೌಜೌ ಇಂಟರ್ಮೀಡಿಯಟ್ ಪೀಪಲ್ಸ್ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ವಿದ್ಯಾರ್ಥಿಗಳ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ವಾಂಗ್ಯುನ್, ತನ್ನ ಸಹಶಿಕ್ಷಕರೊಬ್ಬರೊಂದಿಗೆಮನಸ್ತಾಪ ಹೊಂದಿದ್ದ ಕಾರಣ, ಇವರು ತನ್ನ ಪ್ರತಿಸ್ಪರ್ಧಿ ಶಾಲೆಯ ಮಕ್ಕಳಿಗೆ ವಿಷವುಣಿಸಿದ್ದರು ಎಂದು ನ್ಯಾಯಾಲಯ ಹೇಳಿದೆ.

ನೈಟ್ರೇಟ್ ಬೆರೆಸಿದ ಗಂಜಿ ಸೇವಿಸಿದ ನಂತರ ಹಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಒಂದು ಮಗು ಸಾವನ್ನಪ್ಪಿ,ಉಳಿದಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.